Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/193

From Wikisource
This page has not been proofread.

ಈ ವರ್ಷವೂ ಕ್ರಿಸ್ಮಸ್ ಹಬ್ಬದ ಆಚರಣೆಯ ತಿಂಗಳಲ್ಲಿ ಈ ಸಂತನ ನೆನಪನ್ನು ಮಾಡುವಾಗ ಈ ಸಂಸ್ಕೃತಿಯ ಮೂಲ ಉದ್ದೇಶವನ್ನು ಮನವರಿಕೆ ಮಾಡಿಕೊಂಡು ಹಾಸ್ಯಾಸ್ಪದವಾಗಿ ವರ್ತಿಸದೆ ಗಂಭೀರವಾಗಿ ಈ ಸಂತನ ನೆನಪನ್ನು ಮಾಡೋಣ. ಕ್ರಿಸ್ಮಸ್ ಹಬ್ಬದ ಆಚರಣೆಯಲ್ಲಿ ಸಂತ ಕ್ಲಾಸ್‌ನ ಅಥವಾ ಕ್ರಿಸ್ಮಸ್ ಫಾದರ್‌ನ ನೆನಪು ಮಾಡುವುದು ಯಾಕೆ, ಆತನ ನನ್ನ ಪ್ರತಿಬಿಂಬಿಸುವ ಉಡುಪು, ಕೆಂಪು ಟೊಪ್ಪಿಯನ್ನು ಯಾಕೆ ಧರಿಸುವುದು ಎನ್ನುವುದನ್ನು ಅರಿತುಕೊಂಡು ಆತನನ್ನು ಜೋಕರ್‌ನಂತೆ ಪ್ರತಿಬಿಂಬಿಸದೇ ಇರೋಣ. ಸಂತ ಕ್ಲಾಸ್‌ನ ಬದುಕಿನ ಬಗ್ಗೆ ಅರಿತುಕೊಂಡು ಪ್ರತಿ ವರ್ಷವೂ ಕ್ರಿಸ್ಮಸ್ ಹಬ್ಬವನ್ನು ಆಚರಿಸೋಣ. ಈ ಮೂಲಕ ಸಾಂತಾಕ್ಲಾಸ್‌ನ ಮಾನವೀಯ ಗುಣಗಳು ನಮ್ಮಲ್ಲಿಯೂ ಹಾಸುಹೊಕ್ಕಾಗಿರಲಿ. ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 181