Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/192

From Wikisource
This page has not been proofread.

ಮುದುಕ ಉತ್ತರಿಸಿದ. ಹುಡುಗ ಆಶ್ಚರ್ಯದಿಂದ ತನ್ನ ಮನೆಯೊಳಗೆ ಪ್ರವೇಶಿಸಿದ, ಆ ಮುದುಕನೂ ಅವನ್ನು ಅನುಸರಿಸಿ ಹೀಗೆಂದು ಹೇಳಿದ “ ಆ ಮೂಟೆಯನ್ನು ಕೆಳಗಿಳಿಸಿ ಅದರ ಕಟ್ಟುಗಳನ್ನು ಬಿಡಿಸು, ಅದರೊಳಗಿರುವುದನ್ನೆಲ್ಲವನ್ನು ತೆಗೆದು ಕೆಳಗಿಡು”. ಹುಡುಗನ ತಾಯಿ, ತಂಗಿ, ತಮ್ಮಂದಿರು ಸುತ್ತ ಸೇರಿ ಬಂದು ನಡೆಯುವ ಸಂಗತಿಯನ್ನು ನೋಡಲಾರಂಭಿಸಿದರು. ಹುಡುಗ ತೆಗೆಯಲಾರಂಭಿಸಿದ-ಹಣ್ಣು ಹಂಪಲು, ಸಿಹಿತಿಂಡಿ, ಬಣ್ಣ ಬಣ್ಣದ ಬಟ್ಟೆಗಳು, ಆಟಿಗೆಗಳು, ಇವೆಲ್ಲವನ್ನು ನೋಡಿ ಹುಡುಗನ ಕಣ್ಣಲ್ಲಿ ಆನಂದ ಬಾಷ್ಪ ಉಕ್ಕಿತು. ಇದು ಒಂದು ಸುಂದರ ಕನಸೋ ಎಂದುಕೊಂಡ. “ಸ್ವಾಮೀ ತಾವು ಯಾರು? ಹುಡುಗನ ಮನೆಯವರೆಲ್ಲರೂ ಒಕ್ಕೊರಲಿನಿಂದ ಪ್ರಶ್ನಿಸಿದರು. ಕೂಡಲೇ ಆ ಮುದುಕನು ತಾನು ತೊಟ್ಟಿದ್ದ ವೇಷವನ್ನು ಕಳಚಿ, ಬಿಡೊಪನ ಉಡುಪಿನಲ್ಲಿ ಅವರೆದುರು ಕಾಣಿಸಿಕೊಂಡ. ಇನ್ನಾರು ಆಗಿರಲಿಲ್ಲ, ವೇಷ ಮರೆಸಿ ಬಂದ ಸಾಂತಾಕ್ಲಾಸ್‌ನಾಗಿದ್ದ. ಆತ ಸಂತನ ನೆನೆಪು ಸಾಂತಾಕ್ಲಾಸ್ ವೇಷದಲ್ಲಿ : ಇಂದಿಗೂ ಕೂಡಾ ಸಾಂತಾಕ್ಲಾಸ್ ಅಥವಾ ಕ್ರಿಸ್ಮಸ್ ಫಾದರ್, ಮುದಿ ಪ್ರಾಯದ ದೊಡ್ಡ ಹೊಟ್ಟೆ, ಬಿಳಿಯ ಉದ್ದದ ಗಡ್ಡ, ತಲೆಗೆ ಕೆಂಪು ಟೊಪ್ಪಿ, ಕೈಗೆ ಬಿಳಿ ಕೈಚೀಲ, ಕಾಲಿಗೆ ಕಪ್ಪು ಶೂ ಧರಿಸುತ್ತಾ, ಕೈಯಲ್ಲಿ ಬಹುಮಾನಗಳ ದೊಡ್ಡ ಮೂಟೆ ಹೊತ್ತಿರುವ, ತ್ಯಾಗ ಪ್ರೀತಿಗಳ ಪ್ರತೀಕವಾಗಿರುವ ಕ್ರಿಸ್ಮಸ್ ತಾತ ನಮ್ಮ ಕಣ್ಣ ಮುಂದೆ ಶೋಭಿಸುತ್ತಾನೆ. ಕ್ರಿಸ್ಮಸ್ ದಿನದಂದು ಹೆಚ್ಚಿನ ಚರ್ಚುಗಳಲ್ಲಿ ಸಾಂತಾಕ್ಲಾಸ್ ವೇಷ ಧರಿಸಿ ಮಕ್ಕಳಿಗೆ ಉಡುಗೊರೆ ಹಂಚುತ್ತಾನೆ. ಚಿಕ್ಕ ಮಕ್ಕಳೊಂದಿಗೆ ನರ್ತಿಸುತ್ತಾ ಎಲ್ಲರನ್ನೂ ಮನರಂಜಿಸುತ್ತಾನೆ. ಮನೆ ಮನೆಗೆ ಕ್ರಿಸ್ಮಸ್ ಕ್ಯಾರಲ್ಸ್ ಹೋಗುವಾಗ ಕ್ರಿಸ್ಮಸ್ ತಾತನ ವೇಷದಾರಿಯೊಬ್ಬ ಆ ಗುಂಪಿನೊಂದಿಗಿರುತ್ತಾನೆ. ಅನೇಕರು ಕ್ರಿಸ್ಮಸ್ ತಾತನ ಚಿತ್ರವಿರುವ ಶುಭಾಶಯ ಪತ್ರಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಕ್ರಿಸ್ಮಸ್ ಮರದಲ್ಲಿ ಕ್ರಿಸ್ಮಸ್ ತಾತನ ದೊಡ್ಡ ಚಿತ್ರವನ್ನು ನೇತುಹಾಕುತ್ತಾರೆ. ಒಟ್ಟಿನಲ್ಲಿ ಕ್ರಿಸ್ಮಸ್ ಸಂಸ್ಕೃತಿಯಲ್ಲಿ ಕ್ರಿಸ್ಮಸ್ ಮರ, ಶುಭಾಶಯ ಪತ್ರ, ಕ್ರಿಸ್ಮಸ್ ತಿಂಡಿಗಳು, ಕ್ರಿಸ್ಮಸ್ ಕ್ಯಾರಲ್ಸ್, ಬಣ್ಣ ಬಣ್ಣದ ಮೇಣದಬತ್ತಿಗಳು, ವಿವಿಧ ಗೂಡುದೀಪಗಳು ಇವುಗಳಿಗೆ ಹೇಗೆ ಪ್ರಾಶಸ್ತ್ರವಿದೆಯೋ ಹಾಗೆಯೇ ಈ ಸಾಂತಾಕ್ಲಾಸ್ ಅಥವಾ ಕ್ರಿಸ್ಮಸ್ ತಾತನ ನೆನೆಪನ್ನು ಪ್ರತಿ ಕ್ರೈಸ್ತರೂ ಮಾಡುತ್ತಾರೆ. ಮಕ್ಕಳಿಗೆ ಚಿರಪರಿಚಿತನಾದ ಸಾಂತಾಕ್ಲಾಸ್ ದಯೆ ಹಾಗೂ ಕರುಣೆಯ ಸಾಕಾರಮೂರ್ತಿಯಾಗಿದ್ದಾನೆ. ಈತನಲ್ಲಿ ಮಾನವೀಯ ಗುಣಗಳು ತುಂಬಿ ತುಳುಕುತ್ತವೆ. ಈ ಲೊಕದಲ್ಲಿ ಜೀವಿಸುವ ನಮಗೆಲ್ಲರಿಗೂ ಒಳ್ಳೆಯ ಮಾನವೀಯ ಗುಣಗಳಿರಬೇಕೆಂಬುದು ನಮ್ಮೆಲ್ಲರನ್ನು ಸೃಷ್ಟಿಸಿದ ದೇವರ ಬಯಕೆಯಾಗಿದೆ. ಪ್ರತಿ 180 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.