Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/194

From Wikisource
This page has not been proofread.

ನವೋದಯ ಪದ್ಯಗಳಲ್ಲಿ ಕ್ರಿಸ್ತ ಜಯಂತಿ ಕ್ರಿಸ್ತ ಜಯಂತಿಯು ಬಹು ಸಂತೋಷದ ಹಬ್ಬ ಮಹಾಮಹಿಮನಾದ ದೇವರು ಮಾನವರ ರಕ್ಷಣೆಗಾಗಿ ನರಾವತಾರವನ್ನೆತ್ತಿ ಬಂದ ಶುಭದಿನದ ಆಚರಣೆ. ಜಗತ್ತಿನಾದ್ಯಂತ ಈ ಹಬ್ಬವನ್ನು ಆಚರಿಸುತ್ತಾರೆ. ಪ್ರತಿಯೊಬ್ಬರೂ ಇದರಲ್ಲಿ ಸಂತೋಷಪಡುತ್ತಾರೆ. ಕ್ರಿಸ್ಮಸ್ ಆಚರಣೆಯಲ್ಲಿ ಸಂಗೀತಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ಯಾಕಂದರೆ ಕ್ರಿಸ್ತನು ಹುಟ್ಟಿದ ದಿನದಲ್ಲಿ ದೂತರ ಗಾಯನವಿತ್ತು. ಅಂದಿನಿಂದ ಇಂದಿನವರೆಗೆ ಎಲ್ಲೆಲ್ಲಿ ಈ ಹಬ್ಬವನ್ನು ಆಚರಿಸಲ್ಪಡುತ್ತಾರೋ ಅಲ್ಲಲ್ಲಿ ಈ ಹಬ್ಬದ ಶುಭವಾರ್ತೆಯನ್ನು ಸಂಗೀತಗಳ ಮೂಲಕ ಕ್ರೈಸ್ತರು ಪ್ರಕಟಪಡಿಸುತ್ತಾರೆ. ಕ್ರಿಸ್ಮಸ್ ಸಂಸ್ಕೃತಿಯಲ್ಲಿ ನೂರಾರು ಸಂಗೀತಗಳು ಹುಟ್ಟಿ ಚರಿತ್ರೆ ಸೇರಿವೆ. ಅಲ್ಲದೆ ಹೆಸರುವಾಸಿಯೂ ಆಗಿದೆ. ಹಲವಾರು ಸಂಗೀತಗಳು ಈಗಲೂ ಹಾಡಲ್ಪಡುತ್ತದೆ. ವರ್ಷವೂ ಹೊಸ ಹೊಸ ಸಂಗೀತಗಳು ರಚಿಸಲ್ಪಡುತ್ತದೆ. ಆದರೆ ಈ ಲೇಖನದಲ್ಲಿ ನೂರಾರು ವರ್ಷಗಳ ಹಿಂದೆ ಕನ್ನಡ ಸಂಗೀತಗಳಲ್ಲಿ ಮೂಡಿ ಬಂದ ಕ್ರಿಸ್ತನ ಜನನದ ಶುಭ ಸಂದೇಶವನ್ನು ಸಾರುವ ಕೆಲವು ಸಂಗೀತಗಳ ಸಾಲುಗಳನ್ನು ಇಲ್ಲಿ ಪರಿಚಯಿಸಲು ಪ್ರಯತ್ನಿಸಲಾಗಿದೆ. ಕುರುಬರಿಗೆ ಶುಭವಾರ್ತೆ. 182 (ರಾಗ- ಚೌಪದಿ, ತಾಳ ಉಡಾಪಿ ಝಂಪೆ, ಯೇಸು ಕ್ರಿಸ್ತನ ಜನನ ಚೌಪದನಗಳು: 1894) ನರನಂದನಾಯ ನವೋ, ನರನಂದನಾಯ ನರರಂದನಾಯ ನವೋ, ನರರಕ್ಷಕಾಯ; ಶ್ರೀಮದಲಾನಂದ ಕ್ರಿಸ್ತನ ಜಯಂತಿ ಭೂಮಿಯೊಳಗಿರುವ ಮನುಜರಿಗೆ ಸುಖಶಾಂತಿ, ನಾಮುದದಿ ಪೇಳ್ವೆ ಚೌಪದನದಿ ವಿನಂತಿ ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...