Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/19

From Wikisource
This page has been proofread.

ಕನ್ನಡ ಅಕ್ಷರಗಳನ್ನು ಕೈಯಲ್ಲಿಯೇ ಕೊರೆದು ಬರೆಸಿ ಮುದ್ರಣ ಮಾಡಲಾಗಿತ್ತು.Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/19/br ಕನ್ನಡದ ಅಚ್ಚುಮೊಳೆಗಳ ಮುದ್ರಣ ಬಳಕೆಗೆ ಬರುವ ಮೊದಲು ಇನ್ನೊಂದು ಬಗೆಯ ಮುದ್ರಣವಿದ್ದಿತು. ಅದುವೇ ಶಿಲಾ ಮುದ್ರಣ ಅಥವಾ ಕಲ್ಲಚ್ಚು ಮುದ್ರಣ (stone print / lithography print), ಮಧ್ಯಯುಗ ಕಾಲದಿಂದ ಯುರೋಪಿನಲ್ಲಿ ಮುದ್ರಾಯಂತ್ರಗಳು ಲಭ್ಯವಿದ್ದವು. ರೋಮನ್, ಇಂಗ್ಲಿಷ್ ಇತ್ಯಾದಿ ಲಿಪಿಗಳ ಅಕ್ಷರಗಳೂ ನಿರ್ಮಿತವಾಗಿ ಮುದ್ರಣ ಕಾರ್ಯ ನಿಯಮಿತವಾಗಿ ಜಗತ್ತಿನಾದ್ಯಂತ ಪ್ರಸಾರವಾಯಿತು. ಆದರೆ ಕನ್ನಡ ಲಿಪಿಯ ಅಕ್ಷರ ಮೊಳೆಗಳು ಲಭ್ಯವಿಲ್ಲದಿದ್ದಾಗ ಆ ಮಧ್ಯಂತರದ ಅವಧಿಯಲ್ಲಿ ಕಲ್ಲಚ್ಚು ಮುದ್ರಣ ಅಸ್ತಿತ್ವಕ್ಕೆ ಬಂದಿತು.Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/19/br

ಈ ಶಿಲಾ ಮುದ್ರಣವನ್ನು ಎಲೋಯ್ಡ್ ಸೆನೆಫೆಲ್ಸ್ ಎಂಬ ಪ್ರೇಗ್ ನಿವಾಸಿ 1796ರಲ್ಲಿ ಕಂಡು ಹಿಡಿದ. ಇದಕ್ಕಾಗಿ ಕ್ಯಾಲ್ಸಿಯಂ ಕಾರ್ಬೊನೇಟ್ ಇರುವ ಕಲ್ಲು ಮತ್ತು ಗ್ರೀಸ್‌ನಂತಹ ದ್ರವ ಇವುಗಳನ್ನು ಬಳಸಿದ. ಇದನ್ನೇ ಕಲ್ಲಚ್ಚು ಅಥವಾ ಲಿಥೋಗ್ರಫಿ ಮುದ್ರಣ ಎನ್ನುವರು. ನಮ್ಮಲ್ಲಿ ಕಲ್ಲಿನ ಮೇಲೆ ಶಾಸನಗಳನ್ನು ಕೆತ್ತಿಸುವ ಬಗೆ ತಿಳಿದೇ ಇತ್ತು. ಆದರೆ ಹೆಚ್ಚು ಪ್ರತಿಗಳನ್ನು ಪಡೆಯುವ ವಿಧಾನ ಗೊತ್ತಿರಲಿಲ್ಲ. ಭಾರತದಲ್ಲಿ ಯುರೋಪದಿಂದ ಈ ತಂತ್ರವನ್ನು ನೇರವಾಗಿ ಎತ್ತಿಕೊಂಡಿರಲಿಲ್ಲ. ಕಾವಟೆ ಮುಳ್ಳು, ಮುಳ್ಳುಗಳನ್ನು ಹೊಂದಿದ ಹೊಂಗಾರ ಮರದ ತುಂಡು ಅಥವಾ ಮೆದುವಾದ ಮರದ ತುಂಡುಗಳ ಮೇಲೆ ಅಕ್ಷರಗಳನ್ನು ಕೆತ್ತಿ ಮುದ್ರಿಸುತ್ತಿದ್ದರು. ತದನಂತರ ಮೆದುವಾದ ಕಲ್ಲು. ಜಿಡ್ಡಿನ ಎಣ್ಣೆ, ಕಾಗದ, ಲೇಖನಿ ಇವಿಷ್ಟನ್ನು ಬಳಸಿ ಶಿಲಾ ಮುದ್ರಣವನ್ನು ಮಾಡುತ್ತಿದ್ದರು. ಮುಂದೆ ಅದು ಅವಿಷ್ಕಾರಗೊಂಡು ಹೆಚ್ಚು ಪ್ರತಿ ತೆಗೆಯುವಂತೆ ಮಾನವ ಚಾಲಿತ ಯಂತ್ರವೂ ತಯಾರಿಸಲ್ಪಟ್ಟು ಅದು ನಂತರ ಲಿಥೋಗ್ರಫಿ ಮುದ್ರಣವೆಂದಾಯಿತು (Lithography Print), ಹಳದಿ ಬಣ್ಣದ ಕಡಬ ಕಲ್ಲಿನಂತೆ ಹೋಲುವ ಕಲ್ಲನ್ನು ನಯಗೊಳಿಸಿ ಕಾಗದದಲ್ಲಿ ಬರೆದ ಅಕ್ಷರಗಳನ್ನು ಕನ್ನಡಿಯಲ್ಲಿ ನೋಡಿ ತಿರುಗುಮುರುಗಾಗಿ ಬರೆದು ಕಪ್ಪು ಶಾಯಿ ಬಳಸಿ ಕಾಗದಕ್ಕೆ ಬರೆದ ಅಕ್ಷರಗಳನ್ನು ಒತ್ತುವ ವಿಧಾನದಿಂದ ಕಲ್ಲಚ್ಚು ಮುದ್ರಣ ಮಾಡಲಾಗುತ್ತಿತ್ತು.Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/19/br ಕನ್ನಡ ಭಾಷೆಯ ಪಠ್ಯ ಪುಸ್ತಕಗಳನ್ನು ಹೊರತರಲು ಮೊದಲು ಹೆಜ್ಜೆ ಇಟ್ಟವರು ಆಗಿನ ಮುಂಬಯಿ ಸರಕಾರದಲ್ಲಿ ಶಿಕ್ಷಣಾಧಿಕಾರಿಗಳಾಗಿದ್ದ ಬಾಳಶಾಸ್ತ್ರಿ ಜಾಂಬೇಕರರು, ಮರಾಠಿ, ಗುಜರಾತಿ ಮಕ್ಕಳಿಗಿದ್ದಂತೆ ಕನ್ನಡದ ಮಕ್ಕಳಿಗೂ ಕನ್ನಡದಲ್ಲಿಯೇ ಶಿಕ್ಷಣ ದೊರೆಯಬೇಕು. ಅದಕ್ಕಾಗಿ ಕನ್ನಡ ಪಠ್ಯಗಳುPage:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/19/br

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 07