Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/18

From Wikisource
This page has been proofread.

ಕಲಿಯುವುದರಲ್ಲಿ ಮಗ್ನರಾದ ಪಾಶ್ಚಾತ್ಯರಿಗೆ ಹತ್ತಾರು ಬಗೆಯ ಲಿಪಿಗಳೂ, ಅವುಗಳ ವಕ್ರತೆ ಮತ್ತು ಭಾರ ಇವೆಲ್ಲಾ ಬಹಳ ಕಷ್ಟವನ್ನುಂಟುಮಾಡಿರಬೇಕು. ಭಾರತದ ಎಲ್ಲಾ ಭಾಷೆಗಳಿಗೆ ರೋಮನ್ ಲಿಪಿಯಲ್ಲಿ ಇತರ ಸ್ವರಸೂಚಕ ಚಿಹ್ನೆಗಳೊಂದಿಗೆ ಉಪಯೋಗಿಸುವ ಕ್ರಮವನ್ನು ಬಳಕೆಗೆ ತಂದರು.Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/18/br

{{gap}ಈಸ್ಟ್ ಇಂಡಿಯಾ ಕಂಪೆನಿಯು ತಮ್ಮ ಅಧಿಕಾರವನ್ನುಪಯೋಗಿಸಿ ರೋಮನ್ ಲಿಪಿಯನ್ನು ದೇಶದ ಭಾಷೆಗಳಿಗೆಲ್ಲ ರೂಢಿಗೆ ತರಬೇಕೆಂಬ ಪ್ರಯತ್ನದಲ್ಲಿದ್ದರೂ ಹೊಸಗನ್ನಡ ಸಾಹಿತ್ಯದ ತೇರನ್ನು ಮೊದಲಿಗೆ ಎಳೆದ ಬ್ರಿಟಿಷ್ ಅಧಿಕಾರಿಗಳು ಮಿಶನರಿಗಳು ಹಾಗೂ ದೇಶೀಯರ ನೆರವನ್ನು ಪಡೆದು ಮೊಳೆಗಳನ್ನು ತಯಾರಿಸಿ 1817ರಿಂದ ಕನ್ನಡ ಮುದ್ರಣವನ್ನು ಆರಂಭಿಸಿದರು. ತೆಲುಗು ಹಾಗೂ ಕನ್ನಡಕ್ಕೆ ಒಂದೇ ಬಗೆಯ ಅಚ್ಚುಮೊಳೆಗಳನ್ನು ಕೊಲೆಜ್ ಪ್ರೆಸ್‌ನವರು ಬಳಸುತ್ತಿದ್ದರೆಂಬ ದಾಖಲೆಗಳು ಸಿಗುತ್ತವೆ. ಆದ್ದರಿಂದ ಮೊದಲು ಮುದ್ರಣಗೊಂಡ ಕೃತಿಗಳು ತೆಲುಗು ಅಕ್ಷರದಂತೆ ಕಾಣುವ ಅಕ್ಷರದ ಮೊಳೆಗಳನ್ನು ಉಪಯೋಗಿಸಿಕೊಂಡು ಕನ್ನಡ ಪುಸ್ತಕಗಳನ್ನು ಮುದ್ರಿಸಿದ ಹಲವಾರು ಕೃತಿಗಳು ಲಭ್ಯವಿದೆ. ಉದಾ. 1817ರಲ್ಲಿ ಕಲ್ಕತ್ತದಲ್ಲಿ ಮುದ್ರಣವಾದ ವಿಲಿಯಂ ಕೇರಿಯ ಮೊದಲ ಕನ್ನಡ ವ್ಯಾಕರಣ, ಮತ್ತು 1824ರ ಸತ್ಯವೇದದ ಭಾಗವಾಗಿರುವ ಹೊಸ ಒಡಂಬಡಿಕೆ. ನಂತರ ಬಳ್ಳಾರಿ ಮಿಶನ್‌ ಪ್ರೆಸ್‌ನಲ್ಲಿ ಜಾನ್ ಹಾಂಡ್ಸ್ನಿಂದ ಪ್ರಕಟವಾದ ಕನ್ನಡ ಸತ್ಯವೇದದ ಹಲವು ಭಾಗಗಳು, 1844ರಲ್ಲಿ ಬಳ್ಳಾರಿಯಲ್ಲಿ ಪ್ರಕಟವಾದ ಹೆರ್ಮನ್ ಮೋಗ್ಲಿಂಗ್‌ನ “ಕನ್ನಡ ಸಮಾಚಾರವು", ಪತ್ರಿಕೆಯು ಇದೇ ಕನ್ನಡ ಅಚ್ಚುಮೊಳೆಯನ್ನು ಬಳಸಿಕೊಂಡು ಮುದ್ರಣಗೊಂಡುದು ಕಂಡು ಬರುತ್ತದೆ.Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/18/br

ಕಂಪೆನಿ ಸರಕಾರವು ತಮ್ಮ ಆಡಳಿತದ ಸೌಕರ್ಯಕ್ಕಾಗಿ ಕನ್ನಡ, ತೆಲುಗು, ತಮಿಳು ಕೋಶಗಳನ್ನು ತಜ್ಞರಾದ ಮಿಶನರಿಗಳಿಗೆ ಧನಸಹಾಯ ನೀಡಿ ಸಂಗ್ರಹಿಸಿ ಅಚ್ಚುಹಾಕಿಸಿದರು. ಲಂಡನ್ ಮಿಶನ್‌ ವಿಲಿಯಂ ರೀವ್ ಮದ್ರಾಸ್ ಸರಕಾರದ ಆದೇಶದ ಮೇರೆಗೆ ಇಂಗ್ಲಿಷ್ ಕನ್ನಡ (1824) ಮತ್ತು ಕನ್ನಡ ಇಂಗ್ಲಿಷ್ (1832) ಈ ಎರಡು ಶಬ್ದಕೋಶಗಳನ್ನು ತಯಾರಿಸಿದ. 1830ರಲ್ಲಿ ಕೃಷ್ಣಮಾಚಾರ್ಯರವರ ಕನ್ನಡ ವ್ಯಾಕರಣ ಮುದ್ರಣಗೊಂಡಿತು. ಈ ಮೂರು ಅಪೂರ್ವ ಕೃತಿಗಳು ಮದ್ರಾಸ್‌ನಲ್ಲಿ ಪ್ರಕಟಗೊಂಡದ್ದು. ಆಗ ಇಂಗ್ಲಿಷ್ ಮೊಳೆಗಳನ್ನು ಜೋಡಿಸುವುದು ಸುಲಭವಾಗಿತ್ತು. ಯಾಕಂದರೆ ಇಂಗ್ಲೀಷ್ ಮೊಳೆಗಳು ವಿದೇಶದಿಂದ ಆಮದಾಗಿ ಬರುತ್ತಿತ್ತು. ಆದರೆ ಸೇರಿಸಿಕೊಳ್ಳಬೇಕಾದ ಕನ್ನಡ ಅಕ್ಷರಗಳಿಗಾಗಿ ಈ ಮೊದಲೇ ಬಳಕೆಯಲ್ಲಿದ್ದ ಮರದ ತುಂಡಿನ (Wooden Block) ಮೇಲೆ ಚಿತ್ರಗಳನ್ನು ಕೊರೆಯುವ ಕ್ರಮವನ್ನನುಸರಿಸಿPage:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/18/br 06

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.