Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/106

From Wikisource
This page has not been proofread.

ಸಮಾಜದ ಶಿಕ್ಷಿತ ವರ್ಗಕ್ಕೆ ಉಳಿಗಾಲವಿಲ್ಲ. ಇಂಥಾ ಸ್ಥಿತಿಯನ್ನು ಹೋಗಲಾಡಿಸಬೇಕಾದರೆ ನಮ್ಮಲ್ಲಿ ಉದ್ಯೋಗ ಕಲಾನಿಪುಣರು- ವೈದ್ಯರು ಮೊದಲಾದವರು ಹುಟ್ಟಿ ಬರಬೇಕು. ಇಂಥಾ ಸುಶಿಕ್ಷಿತರಾದ ಯುವಕರನ್ನು ಸಮಾಜದ ಮುಂದಿನ ಏಳಿಗೆಗೆ ಸರಿಯಾಗಿ ತರಬೇತು ಮಾಡಲಿಕ್ಕೆ ಬೇಕಾದ ವಿದ್ಯಾಫಂಡುಗಳನ್ನು ತೆರೆಯಬೇಕು. ದೇಶ ಪ್ರೀತಿ, ಬಂಧುಪ್ರೇಮ, ಕಾರ್ಯ ದುರಂಧರತೆಯೇ ಮೊದಲಾದ ಸದ್ಗುಣಗಳು ಟೊಳ್ಳಾಗಿ ಹೋಗಿರುವ ನಮ್ಮ ಸಮಾಜವು ಎಷ್ಟರ ತನಕ ವಿದೇಶಿ ಮಿಶ್ರನುಗಳ ಮಿಶ್ರನುಗಳ ಮೇಲೆ ಕೈ ನೀಡಿ ನಿಂತುಕೊಳ್ಳುವುದೋ ಅಷ್ಟರ ತನಕ ಸಮಾಜವು ಲೌಕಿಕ ರೀತಿಯಾಗಿಯೂ ಪಾರಾಮಾರ್ಥಿಕವಾಗಿಯೂ ಏಳಿಗೆಯನ್ನು ಹೊಂದಲಾರದು. 66 1934ರಲ್ಲಿ ಮಂಗಳೂರಿನ ಜಪ್ಪು ಸಭೆಯ ಸಭಾಪಾಲಕರಾಗಿದ್ದ ರೆವೆ. ಪೌಲ್ ಸೋನ್ಸ್‌ರವರು ಬಾಸೆಲ್ ಹೋಮ್ ಬೋರ್ಡಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದ ಬಾಸೆಲ್ ಮಿಶನ್ ಅಧ್ಯಕ್ಷರು ಮತ್ತು ಖಜಾಂಜಿ ಮೂಲಕ ಪತ್ರವೊಂದನ್ನು ಹೀಗೆ ಬರೆಯುತ್ತಾರೆ. ಬಾಸೆಲ್ ಮಿಶನರಿಗಳಿಂದ ಮಂಗಳೂರಿನಲ್ಲಿ ಸಭೆಗಳು ಸ್ಥಾಪನೆ ಇಲ್ಲಿ ಹಲವರು ನಿರ್ಗತಿಕರು, ನಿರಾಶ್ರಿತರು, ಅನಾಥರು ಇದ್ದರು. “ಇವರಿಗೆ ನೀವೇ ಊಟಕ್ಕೆ ಕೊಡಿರಿ” ಎಂಬ ಸತ್ಯವೇದದ ಮಾತಿನಂತೆ ಕೈಕಸಬು ಹಂಚಿನ ಕಾರ್ಖಾನೆ, ನೇಯಿಗೆ ಉದ್ಯಮ ಮುಂತಾದ ಘಟಕಗಳನ್ನು ನಿರ್ಮಿಸಿ ಉದ್ಯೋಗಗಳನ್ನು ಸೃಷ್ಟಿಸಿ ಬದುಕಲು ಅನುವು ಮಾಡಿಕೊಟ್ಟರು. ಮಹಾಯುದ್ಧದ ನಂತರ ಮಿಶನ್ ಸಹಾಯದಿಂದ ಮುನ್ನಡೆಯುತ್ತಿದ್ದ ಶಾಲೆ, ಅನಾಥ ಶಾಲೆಗಳಿಗೆ ಬರುವ ದೇಣಿಗೆಗಳು ನಿಂತು ಹೋದವು. ಕಾರ್ಖಾನೆಗಳು ಕಾಮನ್‌ವೆಲ್ತ್ ಪಾಲಾಯಿತು, ಕಾರ್ಖಾನೆಗಳಲ್ಲಿದ್ದ ಹಲವು ವಿಭಾಗಗಳು ಮುಚ್ಚಲ್ಪಟ್ಟಿತು. ಇದರಿಂದ ಹಲವಾರು ಮಂದಿ ಕೆಲಸ ಕಳೆದುಕೊಂಡರು. 1914ರಲ್ಲಿ ಜೆಪ್ಪು ಟೈಲ್ ಫ್ಯಾಕ್ಸಿಯಲ್ಲಿ 300ರಷ್ಟಿದ್ದ ಸಂಖ್ಯೆ 1934ರಲ್ಲಿ 125 ಆಯಿತು. ಸಿಕ್ಕಫಂಡ್, ರೈಸ್‌ಫಂಡ್, ಪೆನ್‌ಫಂಡ್‌ಗಳು ನಿಂತು ಹೋಯಿತು. ಇದರಿಂದ ಹಲವಾರು ಮಂದಿ ಕೆಲಸವಿಲ್ಲದೆ ಕಳೆಯಬೇಕಾಯಿತು. ಹೇಗೆ ನಾವು ಇವರಿಗೆ ಊಟಕ್ಕೆ ಕೊಡಲಿ. ಇವರಲ್ಲಿ ನುರಿತ ಕೆಲಸದವರಿದ್ದಾರೆ. ಈ ಹಿಂದೆ ಬಾಸೆಲ್ ಮಿಶನ್ ಮಾಡುತ್ತಿದ್ದ ಕಾಮನ್‌ವೆಲ್ತ್ ನಡೆಸದೇ ಇರುವ ಮಡಿಕೆ ಮಾಡುವ ಕೆಲಸವನ್ನು ನಮ್ಮವರಿಂದ ಆರಂಭಿಸಬೇಕೆಂದಿದ್ದೇವೆ. ಇದಕ್ಕಾಗಿ ತಮ್ಮ ಸಹಾಯವನ್ನು ನಿರೀಕ್ಷಿಸುತ್ತಿದ್ದೇವೆ”. ದಿನ 1943ರಲ್ಲಿ ಪ್ರೊಟೆಸ್ಟಂಟ್ ಕ್ರಿಶ್ಚನ್ ಕೋ ಅಪರೇಟಿವ್ ಸೊಸೈಟಿಯು ತನ್ನ 25ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಹೊರತಂದ ಸ್ಮರಣ ಸಂಚಿಕೆಯಲ್ಲಿ ಸಂಘದ 94 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...