Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/105

From Wikisource
This page has not been proofread.

ಬಾಸೆಲ್ ಮಿಶನ್ ನಂತರದ ದೇಶೀಯ ಸಹಾಯಕ ಸಂಘ ಸಂಸ್ಥೆಗಳು 1834ರಲ್ಲಿ ಭಾರತಕ್ಕೆ ಬಂದ ಬಾಸೆಲ್ ಮಿಶನರಿಗಳು ಮಂಗಳೂರಿನಲ್ಲಿ 1844ರಲ್ಲಿ ಸ್ಥಾಪಿಸಿದ ಹೊಸೈರಿ/ ನೇಯಿಗೆ ವಿಭಾಗವು 1914ರಲ್ಲಿ ನಡೆದ ಪ್ರಥಮ ಮಹಾ ಯುದ್ಧ ಸಂದರ್ಭದಲ್ಲಿ ಕಾಮನ್‌ವೆಲ್ತ್ ಪಾಲಾಯಿತು. 1844ರಲ್ಲಿ ಬಾಸೆಲ್ ಮಿಶ್ಯನ್ ಸಂಘವು ನೇಯಿಗೆ ಕಾರ್ಖಾನೆಯೊಂದನ್ನು ಆರಂಭಿಸಿತು. 1851ರಲ್ಲಿ ಕೈಮಗ್ಗ ಕಾರ್ಖಾನೆಯ ಕಾರ್ಯವೂ ಆರಂಭವಾಯಿತು. ಇದೇ ಕಾರ್ಖಾನೆಯಿಂದ ಖಾಕಿ ಬಣ್ಣ ಕಂಡು ಹಿಡಿಯಲ್ಪಟ್ಟು ಇಂದು ದೇಶದಾದ್ಯಂತ ಖಾಕಿ ಬಣ್ಣದ ಬಟ್ಟೆಯ ಜನಕ ಬಾಸೆಲ್ ಮಿಶನ್ ಎಂದಾಯಿತು. ನೇಯಿಗೆ ಎರಡು ಶಾಖೆಗಳು ಮಡಿಕೇರಿಗುಡ್ಡೆ ಮತ್ತು ಮುಲ್ಕಿಯಲ್ಲಿತ್ತು. ಮುಲ್ಕಿ ಮಿಶನ್ ಶಾಲೆಯಲ್ಲಿ ಮಗ್ಗದ ತರಬೇತಿಯನ್ನು ಕೊಡುವ ವಿಭಾಗವೂ ಇತ್ತು. ಇವಲ್ಲದೆ ಬಲ್ಮಠ, ಬೊಕ್ಕಪಟ್ನ, ಮುಲ್ಕಿ, ಉಚ್ಚಿಲ, ಪಾಂಗಾಳ ಗುಡ್ಡೆ, ಕೊರಂಗ್ರಪಾಡಿ, ಮಲ್ಪೆ, ಉಡುಪಿ ಮುಂತಾದ ಕ್ರೈಸ್ತ ಸಭೆಗಳ ಸದಸ್ಯರು ಮನೆಯಲ್ಲಿಯೇ ಮಗ್ಗಗಳನ್ನು ಹೊಂದಿ ಉದ್ಯೋಗವನ್ನು ಮಾಡುವ ಕಾರ್ಯಕ್ಕಾಗಿ ಪ್ರೋತ್ಸಾಹ ಮಾಡಲಾಗುತ್ತಿತ್ತು. 1914ರ ನಂತರ ಕಾಮನ್‌ವೆಲ್ತ್ ಪಾಲಾದ ಈ ಸಂಸ್ಥೆ ಹೊಸೈರಿ ಫ್ಯಾಕ್ಟರಿ, ಜಾಡುಕೋಣೆ ಎಂಬ ಹೆಸರಿನಲ್ಲಿ ಬಲ್ಮಠದಲ್ಲಿ ಪ್ರಚಲಿತದಲ್ಲಿದ್ದು 1968ರ ತನಕ ಕಾರ್ಯವೆಸಗುತ್ತಿತ್ತು. ಇಲ್ಲಿ ತಯಾರಿಸಲ್ಪಡುತ್ತಿದ್ದ ಬನಿಯನುಗಳು, ಹೊದಿಕೆ, ಸೀರೆ, ಒಳ ಉಡುಪುಗಳು, ಕಾರ್‌ ಪೆಟ್ ಮುಂತಾದ ಉತ್ಪನ್ನಗಳು ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿತ್ತು. ಸ್ವಾವಲಂಬನೆ ಮತ್ತು ದೇಶೀಯ ಕ್ರೈಸ್ತರು : 1928ರ ಸತ್ಯವ್ರತ ಪತ್ರಿಕೆಯಲ್ಲಿ ಬರೆದ ಲೇಖನವೊಂದರಲ್ಲಿ ಸ್ವಾವಲಂಬನೆ/ ವಿದ್ಯಾನಿಧಿ ವಿಚಾರದಲ್ಲಿ ಬರೆದ ಮಾತುಗಳು ಹೀಗಿವೆ: “ಸಮಾಜಿಕರು ಪ್ರಥಮತಾ ನಮ್ಮ ಸಮಾಜ ನಮ್ಮ ಸಭೆ ನಮ್ಮ ಜನರು ಎಂಬುದನ್ನು ತಿಳಕೊಳ್ಳಬೇಕು. ನಮ್ಮ ಸಭೆ ಎಂದು ತಿಳಕೊಳ್ಳುವಂಥಾ ಒಂದು ಕ್ರೈಸ್ತ ಸಮಾಜವಾದರೂ ಕಾಣುವುದಿಲ್ಲ. ವಿದೇಶಿಯರ ಗಂಜಿಗೆ ಕೈ ನೀಡಿ ನಮ್ಮ ಸಭೆ ಎಂದು ಹಿಗ್ಗಿಕೊಳ್ಳಬಹುದಲ್ಲದೆ ಒಂದೇ ಸ್ವತಂತ್ರ ಸಭೆಯಾದರೂ ನಮ್ಮಲ್ಲಿ ಇಲ್ಲ. ಇಂಥಾ ಸ್ಥಿತಿಯು ಎಷ್ಟರ ತನಕ ಕ್ರೈಸ್ತ ಸಮಾಜದಲ್ಲಿ ಇದೆಯೋ ಅಷ್ಟರ ತನಕ ನಮ್ಮ ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 93