Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/82

From Wikisource
This page has not been proofread.

1912- ಎರಡನೇ ಹಾಳೆಯಲ್ಲಿ 'ಜಾತ್ಯಾಭಿಮಾನದ ಭ್ರಾಂತಿ' ಪದ್ಯದ ಸಾಲುಗಳು ಹೀಗಿವೆ. ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ ? ಜಾತಿ ವಿಜಾತಿ ಎನಬೇಡ, ದೇವನೊಲಿದಾತನೇ ಜಾತ ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು ಸುಡುವಗ್ನಿಯೊಂದೆ ಇರುತಿರೆ, ಕುಲಗೋತ್ರ ನಡುವೆ ಎತ್ತಣದು ?. ಪಂಚಾಂಗ ಪತ್ರಿಕೆಯಲ್ಲಿದ್ದ ಲೇಖನಗಳಿಂದ ನಿರ್ಮಿತವಾದ 2 ಅಪೂರ್ವ ಕನ್ನಡ ಕೃತಿಗಳು 1. ರೋಗ ಚಿಕಿತ್ಸೆಯು. 1876ರಿಂದ 1888 ತನಕದ ಪಂಚಾಂಗಳಲ್ಲಿ ಪ್ರಕಟವಾದ ಆರೋಗ್ಯದ ಮಾಹಿತಿಗಳನ್ನು ಒಟ್ಟುಗೂಡಿಸಿ "ರೋಗ ಚಿಕಿತ್ಸೆ' ಎಂಬ ಹೆಸರಿನ 234 ಪುಟಗಳ ಪುಸ್ತಕವನ್ನು (1000 ಪ್ರತಿಗಳು) 1902ರಲ್ಲಿ ಬಾಸೆಲ್ ಮಿಶನ್‌ ಪ್ರೆಸ್‌ನಲ್ಲಿ ಪ್ರಕಟಿಸಲಾಗಿತ್ತು. ಪುಸ್ತಕದ ಲೇಖಕರು ಪಂಚಾಂಗದ ಸಂಪಾದಕರಲ್ಲೋರ್ವರಾದ ಬಾ. ಶಿವರಾವ್. ಆ ಪುಸ್ತಕದ ಮುನ್ನುಡಿಯಲ್ಲಿ ಹೀಗೆ ಬರೆಯಲಾಗಿದೆ. 1876-88ನೇ ಇಸವಿಗಳ ನಮ್ಮ ಕಂನಡ ಪಂಚಾಂಗದಲ್ಲಿ ಹದಿಮೂರು ವರ್ಷಗಳ ವರೆಗೆ ಪ್ರಕಟಿಸೋಣವಾದ ಶರೀರ ಚಿಕಿತ್ಸೆ ಎಂಬ ವೈದ್ಯ ಸಂಗ್ರಹವು ವಾಚಕರಿಗೆ ಬಹಳ ಪ್ರಯೋಜನಕರವಾಗಿ ತೋರಿದ್ದರಿಂದ ಆ ಕಾಲದ ಪಂಚಾಂಗವು ಹೆಚ್ಚಾಗಿ ಮಾರಾಟವಾದದ್ದಲ್ಲದೆ ಉಳಿದ ಪ್ರತಿಗಳಿಂದ ಈ ಸಂಗ್ರಹಗಳನ್ನು ಮಾತ್ರ ಪ್ರತ್ಯೇಕಿಸಿ ಕಟ್ಟಿಸೋಣವಾದ ಪ್ರತಿಗಳೂ ಸಹಾ ವಿಕ್ರಯವಾಗಿ ಕರ್ಚಾದವು. ಇನ್ನೂ ಗಿರಾಕಿಗಳು ಬಹಳ ಬರುವುದರಿಂದ ಪಂಚಾಂಗದಲ್ಲಿ ಬರೆದ ಅ ಸಂಗ್ರಹವನ್ನೂ ಪುನಃ ಪರಿಶೋಧಿಸಿ ತಿದ್ದಿ ಅನೇಕ ಹೊಸ ಸಂಗತಿಗಳನ್ನು ಸೇರಿಸಿ ಅಡಕವಾದ ಪುಸ್ತಕರೂಪವಾಗಿ ಈಗ ಪ್ರಕಟಿಸಿದ್ದೇವೆ. 2. ಸಹಸ್ರಾರ್ಧ ವೃಕ್ಷಾದಿಗಳ ವರ್ಣನೆ (Five hundred Indian Plants their use in Medicine and the arts in Canarese.) 1881 ster 230 ಪುಟಗಳಲ್ಲಿ ಪ್ರಕಟ, ಎರಡನೇ ಮುದ್ರಣ 1908ರಲ್ಲಿ ಪುಟ-273, (523) ಮೊದಲ ಆವೃತ್ತಿಯ ಸಂಪಾದಕರು C.STOLZ ಮತ್ತು G. PLEBST ಎರಡನೇ ಅವೃತ್ತಿಯ ಸಂಪಾದಕರು I. PFLEIDERER, ಮುನ್ನುಡಿಯಲ್ಲಿ The first edition of this volume was published in 1881 by C.Stolz and G. Plebst, two lay-agents of the Basel Missionary Society in Mangalore. it had grown from an alphabetical list of plants, 70 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...