Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/177

From Wikisource
This page has not been proofread.

(Vater krone du mit Segen unsern Konig) ಭಾಷೆಯಿಂದ ತರ್ಜುಮೆಯಾದ ಸಂಗೀತವಾಗಿದೆ. ಇದನ್ನು ಕನ್ನಡ ಭಾಷೆಗೆ ತರ್ಜುಮೆ ಮಾಡಿದವರು ರೆವೆ. ಎಚ್. ರಿಷ್ (Rev. H. Risch) 1950ರಲ್ಲಿ ಪರಿಷ್ಕೃತಗೊಂಡ ಈ ಸಂಗೀತವು ಈಗಲೂ ಕ್ರೈಸ್ತ ದೇವಾಲಯಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಹಾಗೂ ರಾಷ್ಟ್ರ ಹಬ್ಬಗಳನ್ನು ಅಚರಿಸುವಾಗ ಹಾಡಲಾಗುತ್ತದೆ. ಈ ಸಂಗಿತವನ್ನು ಕನ್ನಡಕ್ಕೆ ಭಾಷಾಂತರಿಸಿದ ರೆವೆ. ಎಚ್, ರಿಪ್‌ರವರು 1863ರಲ್ಲಿ ಜನಿಸಿದವರು. 1888ರಲ್ಲಿ ಭಾರತಕ್ಕೆ ಆಗಮಿಸಿ ಬಾಸೆಲ್ ಮಿಶನ್ ಕೇಂದ್ರವಾಗಿದ್ದ ಉಡುಪಿ ಜಿಲ್ಲೆಯ ಬನ್ನೂರಿನಲ್ಲಿ ತಮ್ಮ ಮೊದಲ ಕಾರ್ಯಕ್ಷೇತ್ರದಲ್ಲಿದ್ದು 4 ಮೈಲು ದೂರದ ಕೈಲೈರಿ ಎಂಬ ಸ್ಥಳದಲ್ಲಿದ್ದುಕೊಂಡು ಸ್ಥಳೀಕ ಭಾಷೆಗಳನ್ನು ಕಲಿತು ಕಲ್ಯಾಣಪುರ, ಹೊನ್ನಾವರ, ಗದಗ, ಬೆಟಗೇರಿ, ಕೇಟಿ ಮುಂತಾದ ಸ್ಥಳಗಳಲ್ಲಿ ಕ್ರೈಸ್ತ ದೇವಾಲಯಗಳಲ್ಲಿ ಸೇವೆ ಸಲ್ಲಿಸಿದುದು ಮಾತ್ರವಲ್ಲದೆ 1908ರಲ್ಲಿ ಮಂಗಳೂರಿನ ಬಾಸೆಲ್ ಮಿಶನ್ ಕೇಂದ್ರದ ಅಧ್ಯಕ್ಷರಾಗಿ ಹಾಗೂ ಬಾಸೆಲ್ ಮಿಶನ್ ಸೆಮಿನೆರಿಯಲ್ಲಿ ಉಪನ್ಯಾಸಕರೂ ಆಗಿದ್ದರು. ಕನ್ನಡ ಸತ್ಯವೇದದ ಭಾಷಾಂತರ ಸಮಿತಿಯಲ್ಲಿ ಸೇವೆ ಸಲ್ಲಿಸಿದ ಇವರು 23 ಕ್ರೈಸ್ತ ಗೀತೆಗಳನ್ನೂ ಕನ್ನಡ ಕನ್ನಡ ಭಾಷಾ ಗೀತೆಗಳನ್ನು ಬರೆದಿದ್ದಾರೆ. ಇವರು ಪರಿಜ್ಞಾನವನ್ನು ಅರಿತವರಾಗಿದ್ದರು. 1914ರಲ್ಲಿ ನಡೆದ ಮಹಾಯುದ್ಧ ಸಂದರ್ಭದಲ್ಲಿ ಬಂಧಿಯಾಗಿ ಅಹಮದ್‌ನಗರದಲ್ಲಿ 3 ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಇವರು ತಮ್ಮ ಸ್ವದೇಶಕ್ಕೆ ತೆರಳಿದರು. ಮಿಶನರಿಗಳ ಕಾರ್ಯ ಮತ್ತೆ ಆರಂಭವಾದಗ ಭಾರತಕ್ಕೆ ಬಂದ ರಿಪ್‌ರವರು ಧಾರವಾಡ ಸಭೆ, ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾಗಲೇ 16-7- 1928ರಲ್ಲಿ ನಿಧನ ಹೊಂದಿದರು. ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 165