Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/138

From Wikisource
This page has not been proofread.

ಬಿಲ್ಲವರು ಕ್ರೈಸ್ತರಾಗಲು ಕಾರಣಗಳು ಮತ್ತು ನಂತರದ ಸಮಸ್ಯೆಗಳು 19ನೇ ಶತಮಾನದ ನಂತರ ಭಾರತ ದೇಶವು ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಪ್ರಗತಿ ಕಂಡಿತು. ಈ ಕಾಲದಲ್ಲಿ ತಲೆ ಎತ್ತಿದ ಅನೇಕ ಸಾಮಾಜಿಕ - ಧಾರ್ಮಿಕ ಚಳವಳಿಗಳು ಭಾರತವನ್ನು ಮಧ್ಯ ಯುಗದಿಂದ ಆಧುನಿಕತೆಯತ್ತ ಒಯ್ದವು. ವೈಚಾರಿಕ ವಲಯದಲ್ಲಿ ಹೊಸತನ, ಆತ್ಮಶೋಧನೆ, ವೈಜ್ಞಾನಿಕ ದೃಷ್ಟಿಕೋನ, ತನ್ನದೆಂಬುದರಲ್ಲಿ ಅಭಿಮಾನ, ಮೊದಲಾದವು ಈ ಚಳವಳಿಯ ವಿಶೇಷ ಲಕ್ಷಣಗಳಾಗಿದ್ದವು. ಈ ಚಳುವಳಿಯಿಂದಾಗಿ ಪಾಶ್ಚಾತ್ಯ ಪ್ರಭಾವದಲ್ಲಿ ಮುಳುಗಿ ಹೋಗಲಿದ್ದ ಪ್ರಾಚೀನ ಭಾರತೀಯ ಸಂಸ್ಕೃತಿ ಮತ್ತು ನಾಗರೀಕತೆ ಪುನಶ್ವೇತನಗೊಂಡಿತು. 18ನೇ ಶತಮಾನದ ಉತ್ತರಾರ್ಧ ಹಾಗೂ 19ನೇ ಶತಮಾನದ ಆದಿಭಾಗದಲ್ಲಿ ಭಾರತೀಯರಲ್ಲಿ ಪಾಶ್ಚಾತ್ರೀಕರಣ ಭರದಿಂದ ಸಾಗಿತು. ಪಾಶ್ಚಾತ್ಯ ಶಿಕ್ಷಣದಿಂದ ಎಚ್ಚೆತ್ತ ಭಾರತೀಯ ಬುದ್ಧಿಜೀವಿಗಳು ತಮ್ಮ ಕ್ಲಿಷ್ಟವಾಗಿದ್ದ ಧಾರ್ಮಿಕ ಮತ್ತು ಸಾಮಾಜಿಕ ಕಟ್ಟುಪಾಡುಗಳನ್ನು ಸಡಿಲಿಸಿ ಆಧುನಿಕವೆನಿಸಿದ ವಿದೇಶಿ ತತ್ವಗಳಿಗೆ ತಮ್ಮ ನಂಬಿಕೆ, ಕಟ್ಟುಪಾಡುಗಳನ್ನು ಮಾರ್ಪಾಟುಗೊಳಿಸಿ ಆಧುನಿಕವೆನಿಸಿದ ಅನ್ಯ ತತ್ವಗಳಿಗೆ ಅನ್ಯ ತತ್ವಗಳಿಗೆ ತಮ್ಮ ನಂಬಿಕೆಗಳನ್ನು ಕೊಳ್ಳತೊಡಗಿದರು. ಪರಿಣಾಮವಾಗಿ ಭಾರತೀಯರ ದೃಷ್ಟಿಕೋನ ಮತ್ತು ವೈಚಾರಿಕತೆಯಲ್ಲಿ ನವಚೈತನ್ಯ ಮೂಡಿತು. ಭಾರತೀಯ ಸಂಸ್ಕೃತಿ ಮುನಶ್ವೇತನ ಗೊಂಡು ರಾಷ್ಟ್ರೀಯ ಜಾಗೃತಿ ಮೂಡಲು ಅನುವಾಯಿತು. ಹೊಂದಿಸಿ ಭಕ್ತಿ ಚಳುವಳಿಗಳು ಸಾರ್ವಜನಿಕ ನೆಮ್ಮದಿಗೆ ಭಂಗ ತರುತ್ತವೆ. ಅವು ಅಸ್ವಸ್ಥ ಸಮಾಜದ ಲಕ್ಷಣಗಳು ಎನ್ನುವವರಿದ್ದಾರೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ಭಕ್ತಿ ಚಳುವಳಿಗಳಿಂದ ಪರೋಕ್ಷವಾಗಿ ಸಮಾಜ ಸುಧಾರಣೆಯಾಯಿತು ಎನ್ನುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಇಹಲೋಕದ ಜೀವನದಲ್ಲಿ ಸಾರ್ಥಕತೆ, ಪರಲೋಕದಲ್ಲಿ ಮೋಕ್ಷವನ್ನು ಪಡೆಯಬೇಕೆನ್ನುವ ಒಂದು ಪ್ರೇರಣೆಯೇ ಭಕ್ತಿಯ ಉಗಮಕ್ಕೆ ಕಾರಣವಾಗಿರಬಹುದು. ಕಾಲಕಾಲಕ್ಕೆ ಭಕ್ತರ ಸಮೂಹ ಅಥವಾ ಸಮುದಾಯಗಳ ಧಾರ್ಮಿಕ ಮೂಢನಂಬಿಕೆ, ಕಂದಾಚಾರಗಳನ್ನು ತೊಡೆದು ಹಾಕಿ ಸಮಾಜದಲ್ಲಿ 126 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು..