Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/120

From Wikisource
This page has not been proofread.

ಆಗಬೇಕೆಂದರೆ ಆಗಲೇ ಬೇಕು ಎನ್ನುವ ಛಲ ಇವರಲ್ಲಿ ಯಾವಾಗಲೂ ಎದ್ದು ಕಾಣುವ ಗುಣ. 15 ತಾಸುಗಳಿಗಿಂತ ಹೆಚ್ಚು ಓದು, ಬರವಣಿಗೆಯಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡ ಹಾವನೂರರಿಗೆ ಟಿ.ವಿ. ವೀಕ್ಷಣೆ, ರೇಡಿಯೋ ಆಲಿಸುವಿಕೆ, ಅಡಿಗೆ, ಅತಿಥಿ ಸತ್ಕಾರ, ಇಂತಹ ಹವ್ಯಾಸಗಳೂ ಇದ್ದವು. ಇಲ್ಲಿದ್ದ ಕೇವಲ ನಾಲ್ಕು ವರ್ಷದಲ್ಲಿ ಪತ್ರಾಗಾರ, ಮಿಶನರಿ, ಹೀಗೆ ಹಲವಾರು ಲೇಖನಗಳನ್ನು ಬರೆಸಿ ಪ್ರಕಟಿಸಿ ನಮ್ಮ ಪತ್ರಾಗಾರದ ಮಹತ್ವವನ್ನು ಇನ್ನೂ ಹೆಚ್ಚಿಸಿದ ಕೀರ್ತಿ ಇವರಿಗೆ ಸಲ್ಲಬೇಕಾದದ್ದೆ. 2 ಬಾರಿ ಸ್ವಿಜರ್ಲೆಂಡಿನ ಬಾಸೆಲ್ ಪತ್ರಾಗಾರಕ್ಕೆ ಹೋದಾಗ (2003, 2008) ಬರಿಗೈಯಲ್ಲಿ ಬರದೆ ಜಿಲ್ಲೆಗೆ, ಮಿಶನರಿಗಳಿಗೆ ಸಂಬಂದಪಟ್ಟ ಮಾಹಿತಿಗಳ ಪ್ರತಿಗಳನ್ನು ಹಿಡುಕೊಂಡೇ ಬರುತ್ತಿದ್ದರು. ಅಲ್ಲದೆ ತಾನು 1963ರಿಂದ ಸಂಗ್ರಹಿಸಿಕೊಂಡು ಬಂದಿದ್ದ ಮಿಶನರಿಗಳ ದಾಖಲೆಗಳನ್ನು ಪತ್ರಾಗಾರಕ್ಕೆ ನೀಡಿರುತ್ತಾರೆ ಸಾಹಿತ್ಯ, ಇತಿಹಾಸಗಳ ಅಪೂರ್ವ ಸಾಮಗ್ರಿ ಡಾ. ಶ್ರೀನಿವಾಸ ಹಾವನೂರರ ಸಂಗ್ರಹ: ತಾನು ಜೀವಮಾನವಿಡೀ ಪ್ರೀತಿಯಿಂದ ಸಂಗ್ರಹಿಸಿದ್ದ ಸುಮಾರು 1700 ಪುಸ್ತಕಗಳನ್ನು ಮಂಗಳೂರಿನ ಕರ್ನಾಟಕ ತಿಯೋಲಾಜಿಕಲ್ ಕಾಲೇಜ್ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಡಾ. ಶ್ರೀನಿವಾಸ ಹಾವನೂರರು ಕನ್ನಡದ ಶ್ರೇಷ್ಠ ಸಾಹಿತಿಗಳು ಮತ್ತು ಹಿರಿಯ ಸಂಶೋಧಕರು, ಅಂಥವರ ಗ್ರಂಥ ಸಂಗ್ರಹ ಅಮೂಲ್ಯವೆಂಬುದರಲ್ಲಿ ಎರಡು ಮಾತಿಲ್ಲ. ಈ ಗ್ರಂಥಸಂಪದದಲ್ಲಿ ಹಾವನೂರರ ಮುಖ್ಯ ವ್ಯಾಸಂಗ ವಿಷಯಗಳಾದ ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಇತಿಹಾಸಕ್ಕೆ ಪ್ರಾಧಾನ್ಯವಿದೆ. ಸಾಹಿತ್ಯ ಪ್ರಕಾರದಲ್ಲಿಯ ಹಳಗನ್ನಡ ಕಾವ್ಯಗಳು ಮತ್ತು ಹೊಸಗನ್ನಡ ಸಾಹಿತ್ಯದ ವಿಮರ್ಶನ ಗ್ರಂಥಗಳು ಸಾಹಿತ್ಯಾಭ್ಯಾಸಿಗಳಿಗೆ ವಿಶೇಷ ಪ್ರಯೋಜನಕಾರಿಯಾಗಿವೆ. ಇವುಗಳಿಗಿಂತ ಹೆಚ್ಚು ದುಷ್ಕರವಾಗಿರುವ, ಸಾಹಿತ್ಯ ಸಮ್ಮೇಳನ ಮತ್ತು ಇತರ ಉತ್ಸವ ಕಾಲದ "ಸ್ಮರಣ ಸಂಚಿಕೆ'ಗಳನ್ನು ಪರಿಶ್ರಮಪಟ್ಟು ಸಂಗ್ರಹಿಸಲಾಗಿದೆ. ಹಿರಿಯ ಲೇಖಕರ ಸಮಗ್ರ ಸಂಪುಟಗಳಿರುವುದು ಇನ್ನೊಂದು ವಿಶೇಷದ ಸಂಗತಿಯಾಗಿದೆ. ಕೈಲಾಸಂ, ಡಿ.ವಿ.ಜಿ., ಮುಳಿಯ ತಿಮ್ಮಪ್ಪಯ್ಯ, ಎಂ.ಎನ್. ಕಾಮತ್, ಗೋವಿಂದ ಪೈ, ಗೌರೀಶ ಕ್ಯಾಕಿಣಿ ಮತ್ತು ಪಾವೆಂ ಆಚಾರ, ಇವರುಗಳ ಹೆಚ್ಚಿನ ಬರಹಗಳಲ್ಲದೆ ವಿಮರ್ಶಾ ಗ್ರಂಥಗಳೂ ಇವೆ. ಎದ್ದು ಕಾಣುವ ದೊಡ್ಡ ಸಂಗ್ರಹ ಶಿವರಾಮ ಕಾರಂತರ ಕೃತಿಗಳದ್ದು. ಈಚಿನವರಾದ ಎಂ.ಎಂ. ಕಲಬುರ್ಗಿಯವರ ಬರಹಗಳಿಗೂ ಇಲ್ಲಿ ಇಂಬು ದೊರೆತಿದೆ. 108 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...