Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/101

From Wikisource
This page has not been proofread.

ಬಿಟ್ಟದ್ದರಿಂದ ಶಾಲೆಯ ಹಾಜರಾತಿ ಕಡಮೆಯಾಯಿತು. ಆದರೂ ಜಿಲ್ಲೆಯಲ್ಲಿ ವಾಸಿಸುತಿದ್ದ ವಿದೇಶಿಯರು ಈ ಶಾಲೆಯ ಪ್ರಯೋಜನ ಪಡೆಯುತ್ತಿದ್ದುದರಿಂದ ವಿದೇಶಿ ಅಧಿಕಾರಿಗಳು ಶಾಲೆ ಮುನ್ನಡೆಯಲು ಸಹಾಯ ಮಾಡುತ್ತಿದ್ದರು. 1849ರ ವರದಿ ಪ್ರಕಾರ ಶಾಲೆಯಲ್ಲಿ ಕನ್ನಡ ಮಾಧ್ಯಮ ವಿಭಾಗವೂ ಇತ್ತು. ಆಂಗ್ಲ ಮಾಧ್ಯಮ ಶಾಲೆಯಲ್ಲಿ 157 ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ 33 ವಿದ್ಯಾರ್ಥಿಗಳೂ ಇದ್ದರು. ಇದರಲ್ಲಿ ಪ್ರೊಟೆಸ್ಟಂಟರು 13, ಕೆಥೋಲಿಕರು 16, ಮುಸಲ್ಮಾನರು 18, ಬ್ರಾಹ್ಮಣರು 113, ಮತ್ತು ಇತರರು 30. 1852ರಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿತ. ಶಾಲೆಯಲ್ಲಿ ಪಠ್ಯವಾಗಿ, ಭಾಷೆ, ಚರಿತ್ರೆ, ಭಾಷಾಂತರ, ಗಣಿತ, ವಿಜ್ಞಾನ, ಭೂಗೋಳ ಮುಂತಾದವುಗಳೊಂದಿಗೆ ಬೈಬಲ್ ಪಾಠವೂ ಇತ್ತು. ಕ್ರೈಸ್ತ ಧಾರ್ಮಿಕ ಪಾಠಗಳನ್ನು ಬೋಧಿಸುವುದು, ಕೆಳವರ್ಗದ ವಿದ್ಯಾರ್ಥಿಗಳಿರುವ ಬೆಂಚಿನಲ್ಲಿ ಮೇಲ್ವರ್ಗದವರು ಕುಳಿತುಕೊಳ್ಳುವುದು ಅಸಾಧ್ಯ. ಹೆಣ್ಮಕ್ಕಳು ಈ ಶಾಲೆಗೆ ಬರಲಾರರು ಹೀಗೆ ಬೇರೆ ಬೇರೆ ಕಾರಣಗಳಿಂದ ಶಾಲೆ ಬಿಟ್ಟವರು ಹಲವಾರು ಮಂದಿ. ಈ ಪರಿಸ್ಥಿತಿಯಲ್ಲಿ ಶಾಲೆಯು ಮುಚ್ಚುವ ಪರಿಸ್ಥಿತಿಯೂ ಬಂದೊದಗಿತ್ತು. ಆದರೆ ಕೆಲವೇ ವರ್ಷಗಳಲ್ಲಿ ಶಾಲೆ ತನ್ನ ಘನತೆಯನ್ನು ಹೆಚ್ಚಿಸಿಕೊಂಡಿತು. ಇದಕ್ಕಾಗಿ ಮಿಶನ್ ಹಲವು ವಿಧವಾದ ಕ್ರಮ ಕೈಗೊಂಡರು. ಮಿಶನರಿಗಳು ಮತ್ತು, ದೇಶೀಯರು ಮುಂಬಯಿಗೆ ತೆರಳಿ ಮುಂಬಯಿ ಪ್ರೆಸಿಡೆನ್ಸಿಯ ವಿದ್ಯಾ ಇಲಾಖೆಯಲ್ಲಿ ನಡೆಯುವ ವಿದ್ಯಾಭ್ಯಾಸ ಕ್ರಮವನ್ನು ಅಭ್ಯಸಿಸಿದರು. ಶಾಲೆಯಲ್ಲಿ ಫೀಸು ತೆಗೆದುಕೊಳ್ಳುವ ಕ್ರಮವನ್ನು ಜಾರಿಗೆ ತರಲಾಯಿತು. 8-9 ವರ್ಷ ಪ್ರಾಯದಲ್ಲಿಯೇ ಹೆಣ್ಮಕ್ಕಳ ಮದುವೆ ನಡೆಯುತ್ತಿದ್ದುದರಿಂದ ಇಂತಹ ಮಕ್ಕಳು ಶಾಲೆಗೆ ಬರುವ ವ್ಯವಸ್ಥೆಗಾಗಿ 1856ರಲ್ಲಿ ಹಂಪನಕಟ್ಟೆಯಲ್ಲಿ ಬ್ರಾಹ್ಮಣ ಹೆಣ್ಮಕ್ಕಳಿಗಾಗಿ ಶಾಲೆಯೊಂದನ್ನು ತೆರೆಯಲಾಯಿತು. ಇಲ್ಲಿ ಕಲಿತ ಹೆಣ್ಣುಮಕ್ಕಳೇ ಮುಂದಕ್ಕೆ ಮಿಶನ್ ಶಾಲೆಗಳಲ್ಲಿ ಮತ್ತು ಜಿಲ್ಲೆಯಲ್ಲಿ ಶಿಕ್ಷಕಿಯರಾಗಿ ನೇಮಕವಾದರು. ಹೆಣ್ಮಕ್ಕಳ ಶಾಲೆಗಳಲ್ಲಿ ಮಹಿಳಾ ಮಿಶನರಿಗಳು ಶಿಕ್ಷಕಿಯಾಗಿ ಉಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದರು. ಶಾಲೆಯಲ್ಲಿ ವಿದ್ಯಾಭ್ಯಾಸವಲ್ಲದೆ ಹೊಲಿಗೆ, ಬೈಂಡಿಂಗ್, ಕರಕುಶಲ ವಸ್ತು ತಯಾರಿಕೆ ಮುಂತಾದ ಹಲವಾರು ತರಬೇತಿಗಳನ್ನು ನೀಡುತ್ತಿದ್ದರು. 1914ರಲ್ಲಿ ನಡೆದ ಮಹಾಯುದ್ಧದಲ್ಲಿ ಶಾಲೆಯನ್ನು ಮುಚ್ಚುವ ಪರಿಸ್ಥಿತಿ ಬಂದೊದಗಿದ ವರದಿಯೊಂದು 1925 ಅಕ್ಟೋಬರ್ ತಿಂಗಳಲ್ಲಿ ಪ್ರಕಟವಾದ ಸತ್ಯವೃತ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ. “ಮಂಗಳೂರಿನಲ್ಲಿರುವ ಮಿಶನ್ ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 89