Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/100

From Wikisource
This page has not been proofread.

ಮಾಧ್ಯಮದ ವಿಭಾಗವನ್ನು ಪ್ರಾರಂಭಿಸಬೇಕಾಯಿತು. 1838ರಲ್ಲಿ ಮೊದಲ ಕನ್ನಡ ಶಾಲೆಯ ಆವರಣದಲ್ಲಿಯೇ ಆಂಗ್ಲ ಮಾಧ್ಯಮ ವಿಭಾಗವನ್ನು ತೆರೆಯಲಾಯಿತು. ಕನ್ನಡದ ಮೊದಲ ಪತ್ರಿಕೆ ಸಂಪಾದಕರಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರುವಾಸಿಯಾದ ಹೆರ್ಮನ್ ಮೋಗ್ಲಿಂಗ್ ಇದರ ನಾಯಕತ್ವ ವಹಿಸಿದ್ದರು. ಪ್ರಾರಂಭವಾದ ಆಂಗ್ಲ ಮಾಧ್ಯಮದ ವಿಭಾಗ ಮುಂದುವರಿ ಯುತ್ತಿದ್ದಂತೆ ಶಾಲೆಯನ್ನು ಈಗಿನ ಕಾರ್‌ಸ್ಪೀಟ್‌ನಲ್ಲಿರುವ ಬಿ.ಇ.ಎಮ್ ಹೈಸ್ಕೂಲ್ ಇರುವಲ್ಲಿಗೆ ಸ್ಥಳಾಂತರಿಸಿ ಅದೇ ಸ್ಥಳದಲ್ಲಿ ಮಂಗಳೂರಿನ ಮೊದಲ ಇಂಗ್ಲಿಷ್ ಶಾಲೆ ಎಂಬ ಹೆಸರಿನಿಂದ ಮುಂದುವರಿಯುತ್ತಿದೆ. ಚರಿತ್ರೆ ಪುಟಗಳಲ್ಲಿ ಸೇರಿರುವ ಜರ್ಮನ್ ಮಿಶನ್ ಶಾಲೆ, ಅಂಗ್ಲೋ ವರ್ಣಾಕುಲ‌ ಶಾಲೆ ಇಂಗ್ಲಿಷ್ ಶಾಲೆ, ಮಿಶನ್ ಶಾಲೆ, ಬಿ.ಇ.ಎಂ. ಶಾಲೆಯೆಂದು ಕರೆಯಲ್ಪಡುತ್ತಿದ್ದ ಶಾಲೆಯ ಚರಿತ್ರೆಯ ಲೇಖನಗಳನ್ನು ಅವಲೋಕಿಸುವ ಮೂಲಕ ಶಾಲೆ ಸ್ಥಾಪನೆ, ಸೇವೆ, ಕಾರ್ಯಾಚರಣೆಗಳನ್ನು ಈ ಮೂಲಕ ಬೆಳಕಿಗೆ ತರಲು ಇಲ್ಲಿ ಪ್ರಯತ್ನಿಸಲಾಗಿದೆ. 1938ರಲ್ಲಿ ಆರಂಭವಾದ ಶಾಲೆಯ ಬಗ್ಗೆ 1962ರಲ್ಲಿ ಮಂಗಳೂರಿನ ಬಲ್ಮಠ ಶಾಂತಿ ದೇವಾಲಯವು ಶತಮಾನದ ವರ್ಷಾಚರಣೆಯ ಸಂದರ್ಭದಲ್ಲಿ ಪ್ರಕಟಿಸಿದ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾದ ಲೇಖನದ ಸಾರಾಂಶ ಹೀಗಿದೆ. 1836ರಲ್ಲಿ ಭಾರತಕ್ಕೆ ಬಂದ ಹೆರ್ಮನ್ ಮೋಗ್ಲಿಂಗ್ ನೆಲ್ಲಿಕಾಯಿ ರಸ್ತೆಯಲ್ಲಿರುವ ನೀರೇಶ್ವಾಲ್ಯದಲ್ಲಿ ನಡೆಯುತ್ತಿದ್ದ ಶಾಲೆಯ ಮುಖ್ಯಸ್ಥರಾದರು. 1838ರಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣವನ್ನು ಪ್ರಾರಂಭಿಸಿದ ಇವರು ಸ್ಥಳಾವಕಾಶದ ಕೊರತೆಯಿಂದ ಪ್ರಸ್ತುತ ಇರುವ ಬಿ.ಇ.ಎಮ್. ಹೈಸ್ಕೂಲ್ ವಠಾರಕ್ಕೆ ಸ್ಥಳಾಂತರಗೊಳಿಸಿದರು. ಹೊಸ ನಿವೇಶನ ಖರೀದಿಯ ನಂತರ ಕಟ್ಟಡದ ನಿರ್ಮಾಣವು ಆಯಿತು. ವಿದ್ಯಾರ್ಜನೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಯಿತು. ಆಗ ಈ ಶಾಲೆಗೆ ಆಂಗ್ಲೋ ವರ್ನಾಕುಲ‌ ಸ್ಕೂಲ್ ಎಂಬ ಹೆಸರಿತ್ತು. 1889ರಲ್ಲಿ ಶಾಲೆಯು ಹೈಸ್ಕೂಲು ದರ್ಜೆಯನ್ನು ಹೊಂದಿ 1890ರಲ್ಲಿ ಮೊದಲ ಮೆಟ್ರಿಕ್ಯುಲೇಶನ್ ತಂಡ ಸಿದ್ಧವಾಯಿತು. 1938ರಲ್ಲಿ ಶತಮಾನೋತ್ಸವವನ್ನು ಆಚರಿಸಿದ ಶಾಲೆ 1958ರಲ್ಲಿ ಜಿಲ್ಲಾ ಸಭಾ ಆಡಳಿತದಿಂದ ಹಳೆ ವಿದ್ಯಾರ್ಥಿ ಸಂಘದ ಆಡಳಿತಕ್ಕೊಳಪಟ್ಟಿತು. 1841ರಲ್ಲಿ ಶಾಲೆಯಲ್ಲಿ 80 ವಿದ್ಯಾರ್ಥಿಗಳಿದ್ದು ಇದರಲ್ಲಿ 30ಕ್ಕಿಂತಲೂ ಹೆಚ್ಚಿನ ಮಕ್ಕಳು ವಿದೇಶಿಯರು. ಮಂಗಳೂರಿನಲ್ಲಿ ನೆಲೆಯೂರಿದ್ದ ಸೈನಿಕ ಪಡೆ 46ನೆ ರೆಜಿಮೆಂಟ್ ಮಂಗಳೂರಿನಿಂದ ತೆರವಾದಾಗ 20 ಸೈನಿಕರ ಮಕ್ಕಳು ಶಾಲೆಯನ್ನು 88 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...