Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/93

From Wikisource
This page has not been proofread.

ನಿರೂಪಗಳು, ಸರ್ವರಾಜ್ಯ ವರ್ತಮಾನಗಳು, ನೂತನವಾದ ಆಶ್ಚರ್ಯ ಸುದ್ದಿಗಳು, ಅನ್ಯರ ನಡೆಗಳು, ಸುಬುದ್ಧಿಗಳು, ಕಥೆಗಳು ಹೀಗೆ ವಿಭಾಗಗಳಿದ್ದು ಪ್ರಕಟವಾಗುತ್ತಿತ್ತು. ಕೋರ್ಟ್, ಪೋಲಿಸ್, ವ್ಯವಹಾರಗಳು, ವಿದೇಶದ ವಾರ್ತೆಗಳು, ಆಮದು ರಫ್ತು ವಿಚಾರಗಳು ಮುಂತಾದ ಹಲವಾರು ವಿವಿಧ ರೀತಿಯ ಸಮಾಚಾರದ ದಾಖಲೆಯಾಗಿದ್ದು 200 ವರ್ಷಗಳ ಹಿಂದಿನ ಚಿತ್ರಣವನ್ನು ಕಣ್ಮುಂದೆ ಇಡುತ್ತದೆ. 2ನೇ ಪತ್ರಿಕೆಯಾದ ಕನ್ನಡ ಸಮಾಚಾರ (1844 ಜೂನ್-1844 ನವೆಂಬರ್) ಪ್ರಾರಂಭವಾದಾಗ ಪತ್ರಿಕೆಯಲ್ಲಿ ಈ ರೀತಿ ಬರೆದಿದ್ದಾರೆ. ಈ ದೇಶಸ್ಥರಲ್ಲಿ ಅನೇಕರಿಗೆ ಕನ್ನಡ ಭಾಷೆಯಲ್ಲಿ ಬರೆದ ಸಮಾಚಾರವನ್ನು ಓದುವುದರಲ್ಲಿ ಮತಿ ಆಗುವುದೆಂದು ನೋಡಿ ಸಂತೋಷದಿಂದ ಅದನ್ನು ವೃದ್ಧಿಮಾಡುವ ಪ್ರಯತ್ನದಿಂದ ಇನ್ನು ಮುಂದೆ ಕಲ್ಲಿನಲ್ಲಿ ಛಾಪಿಸದೆ ಬಳ್ಳಾರಿಯಲ್ಲಿರುವ ಅಕ್ಷರ ಛಾಪಖಾನೆಯಲ್ಲಿ ಅಚ್ಚುಪಡಿ ಮಾಡಲಿಕ್ಕೆ ನಿಶ್ಚಯಿಸಿದ್ದೇವೆ. ಆದ್ದರಿಂದ ಮೊದಲಿನ ಎರಡು ಪಟ್ಟು ಬರಹ ಪಡಿಯುವುದರಿಂದ ಹೆಚ್ಚು ವರ್ತಮಾನವನ್ನು ಚರಿತ್ರೆಗಳನ್ನು ವಿದ್ಯಾಪಾಠಗಳನ್ನೂ ಬುದ್ಧಿ ಮಾತುಗಳನ್ನು ಬರಿಯುವುದಕ್ಕೆ ಸ್ಥಳ ಶಿಕ್ಕುವುದು. ಕನ್ನಡ ಪಂಚಾಂಗ ಎಂಬ ವಾರ್ಷಿಕ ಪತ್ರಿಕೆಯು 1853-1936ರ ತನಕ ಬಾಸೆಲ್ ಮಿಶನ್ ಪ್ರೆಸ್‌ ನಿಂದ ಪ್ರಕಟವಾಗುತ್ತಿತ್ತು. ಅಲ್ಲದೆ ವ್ಯವಸಾಹಿಕ ಪಂಚಾಂಗ ಎಂಬ ವರ್ಷ ಪತ್ರಿಕೆಯೂ ಇತ್ತು ಇದರಲ್ಲಿ ಜಿಲ್ಲೆಗೆ ಸಂಬಂಧಪಟ್ಟ ಸರಕಾರಿ ಉದ್ಯೋಗಸ್ತರು, ತುಳು ಗಾದೆಗಳು, ಸರಕಾರಿ ವಿಚಾರಗಳು ಮುಂತಾದ ಹಲವಾರು ವಿಚಾರಗಳು ಅಡಗಿದ್ದು ಕನ್ನಡ ಪಂಚಾಂಗದಲ್ಲಿ ಪ್ರಕಟವಾದ ಲೇಖನವನ್ನಾಧರಿಸಿ ರೋಗ ಚಿಕಿತ್ಸೆಯು ಮತ್ತು ಸಹಸ್ರಾರ್ಧ ವೃಕ್ಷಾದಿಗಳ ವರ್ಣನೆ ಎಂಬ 2 ಪುಸ್ತಕಗಳನ್ನು ತಯಾರಿಸಲಾಗಿದೆ. 1857 ಕನ್ನಡ ವಾರ್ತಿಕ, ಅಚ್ಚಿನ ಮೊಳೆಗಳನ್ನು ಬಳಸಿ ಮೊದಲು ಪ್ರಕಟವಾದ ಪತ್ರಿಕೆ. 1862ರಲ್ಲಿ ಬಾಸೆಲ್ ಮಿಶನ್‌ನಿಂದ ಪ್ರಕಟವಾಗುತ್ತಿದ್ದ ಮತ್ತೊಂದು ಪತ್ರಿಕೆ ವಿಚಿತ್ರ ವರ್ತಮಾನ ಸಂಗ್ರಹ. ಯಾಕೆ ಈ ವಿಚಿತ್ರ ಹೆಸರು ಎಂದು ನೆನಸಬಹುದು. ಇದು ಸುಂದರ ಚಿತ್ರಗಳನ್ನು ಒಳಗೊಂಡು ಪ್ರಕಟವಾಗುತ್ತಿತ್ತು. ಚಿತ್ರಗಳನ್ನು ಹೊತ್ತು ಬರುತ್ತಿದ್ದ ಕನ್ನಡದ ಪ್ರಪ್ರಥಮ ಪತ್ರಿಕೆ ಇದೇ ಎಂದು ಡಾ. ಹಾವನೂರರು ಸಂಪಾದಿಸಿದ ಕರ್ನಾಟಕ ಪತ್ರಿಕಾ ಸೂಚಿಯಲ್ಲಿ ಬರೆಯುತ್ತಾರೆ. ನ್ಯಾಯ ಸಂಗ್ರಹ 1868- ಕೋರ್ಟು ವ್ಯವಹಾರಗಳನ್ನು ಪ್ರಕಟಿಸುತ್ತಿದ್ದ ಪತ್ರಿಕೆ. ಈ ಪತ್ರಿಕೆಯ ಮುದ್ರಕರು ಮತ್ತು ಪ್ರಕಾಶಕರು ಬಾಸೆಲ್ ಮಿಶನ್ ಆದರೂ ಇದನ್ನು ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು. 81