Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/89

From Wikisource
This page has not been proofread.

ರೀತಿಯ ದ್ರವ್ಯದ ಅಭಾವವುಂಟಾದುದರಿಂದ ಮಿಶನ್ ಸಂಘದವರು ಈ ಪತ್ರಿಕೆಯ ಪ್ರಕಟಣೆಯನ್ನು ಈ ವರ್ಷದ ಕೊನೆಯಲ್ಲಿ ಅಂದರೆ ಈ ವಾರ ನಿಲ್ಲಿಸಿಬಿಡಲು ಅತ್ಯಂತ ವ್ಯಸನದಿಂದ ನಿರ್ಧರಿಸಲೇಬೇಕಾಯಿತು. “ವೃತ್ತಾಂತ ಪತ್ರಿಕೆ” ಯು ಯುದ್ಧದಿಂದ ಮರಣಕ್ಕೀಡಾಯಿತೆಂಬುದರಲ್ಲಿ ಸಂದೇಹವಿಲ್ಲ. ನಮ್ಮ ಪತ್ರಿಕೆಯ ಪ್ರಕಟಣೆಯನ್ನು ನಿಲ್ಲಿಸುವುದು ನಮಗೂ ನಮ್ಮ ವಾಚಕರಿಗೂ ಅತ್ಯಂತ ದುಃಖಕರವಾದ ವಿಷಯವಾದಾಗ್ಯೂ ಇಷ್ಟು ವರ್ಷಕಾಲ ಈ ಸಂಸ್ಥಾನದ ಪ್ರಜೆಗಳಿಗೆ ಇದರ ಮೂಲಕ ಸೇವೆಯನ್ನು ಸಲ್ಲಿಸಲು ನಮಗೆ ಅವಕಾಶ ದೊರೆತುದಕ್ಕಾಗಿ ನಾವು ಅತ್ಯಂತ ಕೃತಜ್ಞರಾಗಿದ್ದೇವೆ. ಈ ಪತ್ರಿಕೆಯ ಸಂಪಾದಕ ರಾಗಿದ್ದವರ ಪೈಕಿ ಅತ್ಯಂತ ದಕ್ಷರಾದ ಥಾನ್ಸನ್‌ರವರು ಸುಮಾರು 40 ವರ್ಷಗಳ ಹಿಂದೆ ನಮ್ಮಿ ಪತ್ರಿಕೆಯ ವಿಷಯದಲ್ಲಿ ಈ ರೀತಿ ಬರೆದಿದ್ದರು. “ಕ್ರೈಸ್ತ ವರ್ತಮಾನ ಪತ್ರಿಕೆಯು ತನ್ನದೇ ಆದ ಉದಾತ್ತ ಧೈಯಗಳನ್ನು ಪರಿಪಾಲಿಸಬೇಕು. ಇದು ಜನತೆಯ ನ್ಯಾಯಬದ್ಧವಾದ ಕುಂದುಕೊರತೆಗಳ ಪರವಾಗಿ ನಿರ್ಭೀತಿಯಿಂದ ವಾದಿಸುವುದಕ್ಕೆ ಹೆದರುವುದಿಲ್ಲ. ಅಲ್ಲದೆ ಸರ್ಕಾರವು ನಿಷ್ಕಾರಣವಾಗಿ ದೂಷಣೆಗೆ ಗುರಿಯಾಗಿದ್ದಾಗ ಅದನ್ನು ಪ್ರತಿಭಟಿಸದೆ ಆಲಸ್ಯದಿಂದಿರುವುದೂ ಇಲ್ಲ. ಕೀರ್ತಿ ಅಪಕೀರ್ತಿಗಳಲ್ಲಿಯೂ ಕ್ರೈಸ್ತರ ವರ್ತಮಾನ ಪತ್ರಿಕೆಯು ತಾನು ಜನರ ನೈಜ್ಯವಾದ ಹಿತಮಿತನೆಂಬುದನ್ನು ಸ್ಥಾಪಿಸಿಕೊಳ್ಳಬೇಕು. “ವೃತ್ತಾಂತ ಪತ್ರಿಕೆ”ಯು ಮೈಸೂರು ಸರ್ಕಾರದ ಮಿತ್ರ ಪಕ್ಷಕ್ಕೆ ಸೇರಿದುದೆಂದು ಜನರು ಒಂದು ಸಾರಿ ಉಪೇಕ್ಷಿಸಿದ್ದಾರೆ. ಮತ್ತೊಂದು ಬಾರಿ ಇದು ಬ್ರಿಟಿಷರಿಗೆ ಸಂಬಂಧಪಟ್ಟದ್ದೆಲ್ಲವನ್ನೂ ಸುಮ್ಮನೆ ಸ್ತುತಿಸುವ ಹೊಗಳುಭಟನೆಂದು ಹೇಳಿದ್ದಾರೆ. ಅದಾಗ್ಯೂ ಈ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯು ಸತ್ಯವಾದುದೇ ಆಗಿರಬೇಕೆಂಬ ನಂಬಿಕೆ ಜನರಲ್ಲಿ ಹರಡಿರುತ್ತದೆ”. ಫಾಮ್‌ನ್‌ರವರು ಯಾವ ಉದಾತ್ತ ಧೈಯಗಳನ್ನಿಟ್ಟುಕೊಂಡು ಈ ಪತ್ರಿಕೆಯನ್ನು ನಡೆಸುತ್ತಿದ್ದರೋ ಅದೇ ಧೈಯಗಳನ್ನು ಈ ಪತ್ರಿಕೆಯ ಐವತ್ತು ವರ್ಷಗಳ ಜೀವಾವಧಿಯಲ್ಲಿ ಅದರ ಇತರ ಸಂಪಾದಕರೂ ಸಹ ಅನುಸರಿಸಿಕೊಂಡು ನಾವು ದೃಢವಾಗಿ ಹೇಳುತ್ತೇವೆ. ಮುಖ್ಯವಾಗಿ ದೇಶದಲ್ಲೆಲ್ಲಾ ಸುಳ್ಳು ಸುದ್ದಿಗಳೂ ಉಲ್ಲೇಕ್ಷಿತ ಸಮಾಚಾರಗಳೂ ವಾಯುವೇಗದಿಂದ ಹಬ್ಬುತ್ತಿರುವ ಯುದ್ಧಕಾಲದಲ್ಲಿ ನಾವು ವಾಸ್ತವಾಂಶಗಳನ್ನೇ ಹೊರತು ಮತ್ತೇನನ್ನೂ ಪ್ರಕಟಿಸದಂತೆ ಪ್ರಯತ್ನ ಪಟ್ಟಿರುತ್ತೇವೆ. ದೇವರು ನಮ್ಮ ಪಕ್ಷದಲ್ಲಿದ್ದರೆ ನಮಗೆ ಸೋಲಾಗುವುದು ಕೇವಲ ಅಸಾಧ್ಯವೆಂದು ಭರವಸೆ ಕೊಡುವುದರ ಮೂಲಕ ಜನಗಳ ಮನಸ್ಸನ್ನು ಸ್ತಿಮಿತಕ್ಕೆ ತರಲು ಪ್ರಯತ್ನಪಟ್ಟಿರುತ್ತೇವೆ. ಇತ್ತೀಚಿನ ವರ್ಷಗಳಲ್ಲಿ ನಾವು “ವೃತ್ತಾಂತ ಪತ್ರಿಕೆ” ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 77