Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/87

From Wikisource
This page has not been proofread.

ಕಜೆಬಾರ್ ಬಿತ್ತೋದ್ ಬೊಳ್ಳರಿ ಕೊಯ್ಯಲ್ಯೂ ಕೆಟ್ಟ ನೆಲ್ಲು ಬುಟ್ಟಿ ತುಂಬ ಇದ್ದರೇನು ಎಡ್ಡೆ ಬಿತ್ತ್ ಎಡ್ಡೆ ಬೈಟೇ ಕಳ್ಕೊಡು ಅನುರಾಧೆ ಬರ್ಸ ಪಂತಿ ಬಾಪೆಲೆ. ಹೊಲ ಸಹಾಯವಿಲ್ಲದೆ ನೆಲವಿದ್ದರೇನು ಮೇವು ಇಲ್ಲದ ಹಸು ಮೊಲೆಹಾಲು ಇಲ್ಲದ ಕೂಸು ಹೊಟ್ಟೆಗಿಲ್ಲದ ಎತ್ತು ಹಟ್ಟಿಯಲ್ಲಿದ್ದರೂ ಫಲವಿಲ್ಲ ಎತ್ತು ಸಾಕಿದರೆ ಭತ್ತಕ್ಕೆ ಕಡಿಮೆಯಾಗದು ಮುತ್ತಿಗಿಂತಲೂ ಎತ್ತು ಉತ್ತಮ ಧೋತ್ರ ತುತ್ತುನಾಯಗ್ ಕೈಕಂಜಿ ದಾಯೆಗ್ ನೋಡಿದರೆ ಜಾನುವಾರು ಬಿಟ್ಟರೆ ಮನೆ ಮಾರು ಪಣೆಟ್ ಬರ್ಸ ಬಂಡ ಪಣಿ ಕಡಪಂದ್ ಮಣಿಟ್ ಬರ್ಸ ಬಂಡ ಪುಚ್ಚೆಗ್‌ಲಾ ನುಪ್ಪು ತಿಕ್ಕಂದ್‌. ವೃತ್ತಾಂತ ಪತ್ರಿಕೆ 1887-1941- ಈ ಪತ್ರಿಕೆಯು ಮೈಸೂರಿನ ವೆಸ್ಲಿ ಪ್ರೆಸ್‌ನಲ್ಲಿ ಮುದ್ರಣಗೊಂಡು ವೆಸ್ಲಿಯನ್ ಮಿಶನ್‌ನಿಂದ ಪ್ರಕಟಗೊಳ್ಳುತ್ತಿತ್ತು. 54 ವರ್ಷಗಳ ಕಾಲ ನಿರಂತರ ಮುದ್ರಣಗೊಳ್ಳುತ್ತಿದ್ದ ಈ ಪತ್ರಿಕೆಯು ಪತ್ರಿಕೋದ್ಯಮ ಚರಿತ್ರೆಯಲ್ಲಿ ದಾಖಲಿಸುವ ಸ್ಥಾನವನ್ನು ಪಡೆದಿದೆ. ಹಿಂದೂಸ್ಥಾನದ ವಿಚಾರಗಳು, ಮಹಿಳೆಯರ ಪ್ರಪಂಚ, ಒಳದೇಶದ ವೃತ್ತಾಂತ, ಹಿಂದೂಸ್ಥಾನದ ರಾಜಕೀಯ ವಿಚಾರಗಳು, ಮೈಸೂರು ಗಜೆಟ್ ಸಂಗ್ರಹ, ವಿವಿಧ ಯುದ್ಧ ವೃತ್ತಾಂತಗಳು, ಯುರೋಪಿನ ಯುದ್ಧ ಸಮಾಚಾರ, ವಿದೇಶ ವರ್ತಮಾನಗಳು, ಮೈಸೂರು ದಿವಾನರ ಉಪನ್ಯಾಸ, ಮಹಾರಾಜರ ವಿವಾಹ ಮಂಟಪವು ಹೀಗೆ ವಿಭಿನ್ನ ರೀತಿಯಲ್ಲಿ ಓ ಪತ್ರಿಕೆಯು ಹೊರಬರುತ್ತಿತ್ತು. ಈ ಪತ್ರಿಕೆಗಳ ಸಂಗ್ರಹಗಳನ್ನು ಕೂಲಂಕುಶವಾಗಿ ಪರಿಶೀಲಿಸಿದರೆ ಈ ಪತ್ರಿಕೆಯೊಂದರಲ್ಲೇ ನೂರಾರು ವಿಷಯಗಳ ಸಂಶೋಧನೆಗಳನ್ನು ಕೈಗೆತ್ತಿಕೊಳ್ಳಬಹುದು. 54 ವರ್ಷಗಳ ಕಾಲ ಕರ್ನಾಟಕದಾದ್ಯಂತ ಪ್ರಸಾರದಲ್ಲಿದ್ದ ವೃತ್ತಾಂತ ಪತ್ರಿಕೆ ಕೊನೆಗೊಳ್ಳುವ ಕಾರಣವನ್ನು ಕೊನೆ ಸಂಚಿಕೆಯಲ್ಲಿ ಹೀಗೆ ವಿವರಿಸಿದ್ದಾರೆ: “ನಮ್ಮ ಜೀವಮಾನದಲ್ಲಿ ನಾವು ಹಿಂದೆಂದೂ ಮಾಡದಿದ್ದ ಬಹುಶಃ ಅತ್ಯಂತ ಕಷ್ಟಕರವೆನಿಸಿದ ಕಾರ್ಯವನ್ನು ಅಂದರೆ ನಮ್ಮಿ “ವೃತ್ತಾಂತ ಪತ್ರಿಕೆ” ಯ ಈ ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 75