Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/77

From Wikisource
This page has not been proofread.

ಹದಿನೇಳನೇ ನಂಬ್ರದ ಕಾಗದವು ಮಾರ್ಚಿ ತಾರೀಕು 1ರಲ್ಲಿ ದೇವರ ಚಿತ್ರವಾದರೆ ಬಳ್ಳಾರಿಯಲ್ಲಿ ಛಾಪಿಸಲ್ಪಡುವುದು. ಅಂದಿನಿಂದ “ಮಂಗಳೂರ ಸಮಾಚಾರ”ವೆಂಬ ಹೆಸರನ್ನು ಬಿಟ್ಟು ಈ ಕಾಗದವು ಕನ್ನಡ ಭಾಷೆಯನ್ನಾಡುವ ಸಕಲ ಜನರಲ್ಲಿ ಪ್ರಸಿದ್ಧಿಯಾಗಬೇಕೆಂಬ ಯಿಚ್ಚೆಯಿಂದ “ಕನ್ನಡ ಸಮಾಚಾರ”ವೆಂಬದನ್ನು ಮೇಲೆ ಬರೆಯಲಾದೀತು. 1857 ಕನ್ನಡ ವಾರ್ತಿಕ, ಅಚ್ಚಿನ ಮೊಳೆಗಳನ್ನು ಬಳಸಿ ಮೊದಲು ಪ್ರಕಟವಾದ ಪತ್ರಿಕೆಯಾಗಿದೆ. 1862-1863 ಬಾಸೆಲ್ ಮಿಶನ್‌ನಿಂದ ಪ್ರಕಟವಾಗುತ್ತಿದ್ದ ಮತ್ತೊಂದು ಪತ್ರಿಕೆ ವಿಚಿತ್ರ ವರ್ತಮಾನ ಸಂಗ್ರಹ. ಯಾಕೆ ಈ ವಿಚಿತ್ರ ಹೆಸರು ಎಂದು ನೆನಸಬಹುದು. ಇದು ಸುಂದರ ಚಿತ್ರಗಳನ್ನು ಒಳಗೊಂಡು ಪ್ರಕಟವಾಗುತ್ತಿತ್ತು. ವೂರ ವರ್ತಮಾನಗಳು, ಬುದ್ದಿಯ ಕತೆಗಳು, ವಿವಿದ ಲೇಖನಗಳು, ಚಿತ್ರಗಳನ್ನು ಹೊತ್ತು ಬರುತ್ತಿದ್ದ ಕನ್ನಡದ ಪ್ರಪ್ರಥಮ ಪತ್ರಿಕೆ ಇದೇ ಎಂದು ಡಾ. ಹಾವನೂರರು ಸಂಪಾದಿಸಿದ ಕರ್ನಾಟಕ ಪತ್ರಿಕಾ ಸೂಚಿಯಲ್ಲಿ ಬರೆಯುತ್ತಾರೆ. ಸತ್ಯದೀಪಿಕೆ(I886-1917) ಇದು ಕ್ರೈಸ್ತ ಸಭಾ ವಾರ್ತೆಗಳನ್ನು ಪ್ರಕಟಿಸುತ್ತಿದ್ದ ಪತ್ರಿಕೆಯಾಗಿದ್ದರೂ ದೇಶಿಯ ಬರಹಗಾರರ ಬರವಣಿಕೆಗಳು ಈ ಪತ್ರಿಕೆಯಲ್ಲಿ ಬರುತ್ತಿತ್ತು. 1905ರ ಸುಮಾರಿಗೆ ಪಂಜೆ ಮಂಗೇಶರಾಯರು ಹರಟೆಮಲ್ಲ ಶೀರ್ಷಿಕೆಯಡಿ ಬರೆಯತ್ತಿದ್ದ ಲೇಖನದ ಒಂದು ಮಾದರಿ ಹೀಗಿದೆ. “ಹಂಪನಕಟ್ಟೆಯಿಂದ ಮಡಿಕೇರಿಗುಡ್ಡದವರೆಗೆ ರಸ್ತೆ ಎಲ್ಲಾ ಹುಣ್ಣು ಹುಣ್ಣಾಗಿ ಕೀವು ನಿಂತಿದೆ. ಸರದಾರರ ಗಾಡಿ ಹೋಗುವ ಈ ರಸ್ತೆಗೆ ಈ ಅವಸ್ತೆ; ಮಿಕ್ಕ ಹಾದಿಗಳ ಗತಿ ಕೇಳುವುದೇನು. ಮಳೆಗಾಲ ಮುಗಿಯುತ್ತಾ ಬಂತು ಕೊಳೆಕಾಲ ಮಾತ್ರ ತಪ್ಪಲಿಲ್ಲ. ಈ ಬಿರುಮಳೆಗೆ ಉಳ್ಳಾಲ ಸೇತುವೆಗೆ ರೈಲ್ವೆಯವರು ಕಟ್ಟಿದ ಅಣೆಕಟ್ಟು ನಿಂತದ್ದು ಆಶ್ಚರ್ಯ. ಮಂಗಳೂರಿಂದ ಉಡುಪಿಗೆ ರೈಲು ಮಾರ್ಗವಾಗಲು ಸರ್ವೆ ಮಾಡುತ್ತಾರಂತೆ. ಇದು ನಿಜವೇ ಸ್ವಾಮಿ, ಮಾಜಿ ಧರ್ಮಸ್ಥಳದ ಪೆರ್ಗಡೆಯವರಾದ ನಮ್ಮ ಮಂಜಪ್ಪ ಹೆಗ್ಗಡೆಯವರು ನಮ್ಮ ಮಂಗಳೂರು ಮುನಿಸಿಪಾಲಿಟಿಯಲ್ಲಿರುವ ಗೋವುಗಳಿಗೆ ಅಲ್ಲಲ್ಲಿ ನೀರು ಸಿಕ್ಕುವ ಹಾಗೆ, ಸ್ವಲ್ಪ ಹಣವನ್ನು ಶೇಖರಿಸಿ ಅವರ ವಶಕ್ಕೆ ಕೊಟ್ಟರಂತೆ. ಹಾಗೆಯೇ ಮಂಜೇಶ್ವರ ರಾಮಕೃಷ್ಣರಾಯರು ಬಾಲಕಿಯರ ಪಾಠ ಶಾಲೆಯ ಬಗ್ಗೆ ಸ್ವಲ್ಪ ಧನವನ್ನು ಮುನಿಸಿಪಾಲಿಟಿಯವರಿಗೆ ಕೃಷ್ಣಾರ್ಪಣೆ ಮಾಡಿದ್ದಾರಂತೆ, ಇವುಗಳ ಇತ್ಯರ್ಥವು ಇನ್ನೂ ಆಗಲಿಲ್ಲ. ಅದರಂತೆ ಹುಲಿಗಳ ಬಿನ್ನಹವನ್ನು ನೀವು ಮೂಲೆಗೆ ತಳ್ಳಬಾರರು. ಡೊಂಗರಕೇರಿಯಲ್ಲಿ ಗೋಕಲ್ಲು ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 65