Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/71

From Wikisource
This page has not been proofread.

ಮಿಶನರಿಗಳು ಇಲ್ಲಿ ಕೈಗಾರಿಕೆ, ವಿದ್ಯಾಸಂಸ್ಥೆ, ಮುದ್ರಣಾಲಯಗಳನ್ನು ಸ್ಥಾಪಿಸಿ ಹಲವಾರು ಸಾಹಸ ಮಾಡಿದ್ದಾರೆ. 1841ರಲ್ಲಿ ಜಿಲ್ಲೆಯಲ್ಲಿ ಬಾಸೆಲ್ ಮಿಶನ್‌ ಪ್ರೆಸ್‌ನ್ನು ಸ್ಥಾಪಿಸಿ ಕನ್ನಡ ಮತ್ತು ತುಳುವಿನಲ್ಲಿ ಮುದ್ರಣ ಕಾರ್ಯ ಪ್ರಾರಂಭಿಸಿದ ಇವರು 1843ರಲ್ಲಿ ವಾರ ಪತ್ರಿಕೆಯೊಂದನ್ನು ಸ್ಥಾಪಿಸಿ ಇಲ್ಲಿನ ಜನರಿಗೆ ವಾಚನಾಭಿರುಚಿ ుంటు ಮಾಡಿದರೂ ಸುಮಾರು 50 ವರ್ಷಗಳವರೆಗೆ ಪತ್ರಿಕೋದ್ಯಮ ಅಭಿವೃದ್ಧಿಗೊಂಡದ್ದು ಕಂಡುಬರುವುದಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ಇವುಗಳಲ್ಲಿ ಮುಖ್ಯವಾದುದೆಂದರೆ ವಿದೇಶಿ ಸರಕಾರದವರು ದೇಶಭಾಷೆಗಳಿಗೆ ಶಿಕ್ಷಣ ವಿಚಾರದಲ್ಲಿ ಕಲ್ಪಿಸಿಕೊಡಬೇಕಾದಷ್ಟು ಪ್ರಶಸ್ಥ ಸ್ಥಾನವನ್ನು ಕಲ್ಪಿಸಿಕೊಡದಿದ್ದುದೂ, ಆಂಗ್ಲಭಾಷೆಗೆ ಅಗ್ರಸ್ಥಾನವನ್ನು ಉದ್ದೇಶಪೂರ್ವಕವಾಗಿ ಕಲ್ಪಿಸಿಕೊಟ್ಟದ್ದೂ, ಜಿಲ್ಲೆಯ ಜನತೆ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ದೇಶ ಭಾಷಾ ಅಭಿಮಾನವನ್ನು ತೊರೆದು ಬಿಟ್ಟದ್ದು, ಓದುಬರಹ ಬಲ್ಲವರ ಸಂಖ್ಯೆ ಕಡಿಮೆ ಇದ್ದದ್ದು, ಇತರ ಭಾಷೆಗಳಲ್ಲಿರುವಷ್ಟು ಮಂದಿ ಸಮರ್ಥ ಪತ್ರಿಕಾ ಲೇಖಕರು ಮುಂದೆ ಬಾರದಿದ್ದುದು, ಇವೆಲ್ಲವುಗಳು ಕಾರಣವಾಯಿತೆಂದರೆ ತಪ್ಪಾಗಲಾರದು. 177 ಸಂವತ್ಸರಗಳನ್ನು ಪೂರೈಸಿದ ಮಂಗಳೂರ ಸಮಾಚಾರ ಎಂಬ ಕನ್ನಡದ ಪ್ರಪಥಮ ತಿಂಗಳಿಗೆರಡಾವರ್ತಿ ಪ್ರಕಟಗೊಳ್ಳುತಿದ್ದ ಪತ್ರಿಕೆಯು 1843 ಜುಲೈ 1 ರಂದು ಮಂಗಳೂರಿನ ಬಲ್ಮಠದಲ್ಲಿದ್ದ ಬಾಸೆಲ್ ಮಿಶನ್ ಪ್ರೆಸ್‌ನಲ್ಲಿ ಮುದ್ರಣಗೊಂಡು ಪ್ರಕಟಗೊಂಡಿತು. ಒಂದು ದುಡ್ಡು ಕ್ರಯಕ್ಕೆ ಮಾರಲ್ಪಡುತ್ತಿದ್ದ ಈ ಪತ್ರಿಕೆಯ ಮುಖಪುಟದಲ್ಲಿ ಈ ಕಾಗದವು ಕೊತ್ವಾಲ್ ಕಟ್ಟೆಗೆ ಯೆದುರಿರುವ ಯೋಹಾನ್ ಅಪ್ಪಂಣನ ಮನೆಯಲ್ಲಿ/ಕೋತ್ವಾಲ್ ಕಟ್ಟೆಯಲ್ಲಿ ತಾಲೂಕು ಕಛೇರಿ ಹತ್ತಿರವಿರುವ ಇಂಗ್ಲೀಷ್ ಶಾಲೆಯಲ್ಲಿಯೂ ಕ್ರಯಕ್ಕೆ ಸಿಕ್ಕುವುದು ಎಂಬುದಾಗಿ ನಮೂದಿಸಲಾಗಿದೆ. ಜುಲೈ 1843 ರಿಂದ 1844 ಫೆಬ್ರವರಿ ತನಕ ಪ್ರಕಟಗೊಂಡು 16 ಸಂಚಿಕೆಗಳು ಮಾತ್ರ ಮಂಗಳೂರ ಸಮಾಚಾರ ಎಂಬ ಹೆಸರಿನಿಂದ ಪ್ರಕಟಗೊಂಡು ನಂತರ “ಕಂನಡ ಸಮಾಚಾರ”ವೆಂಬ ಹೆಸರಿನಿಂದ ಮುನ್ನಡೆಯತೊಡಗಿತು. ಪತ್ರಿಕೆಯ ಮೊದಲ ಸಂಚಿಕೆಯಲ್ಲಿಯೇ ಪತ್ರಿಕೆಯನ್ನು ಹೊರಡಿಸುವ ಉದ್ದೇಶವಾದರೂ ಏನು? ಪತ್ರಿಕೆಯಲ್ಲಿ ಯೇನೇನಿದೆ, ಯೇನೇನಿರಬೇಕು ఎంబ ಪರಿಚಯವಿದೆ. 'ಮಂಗಳೂರಿನವರು ಮೊದಲಾದ ಈ ದೇಶಸ್ಥರು ಕಥೆಗಳನ್ನೂ ವರ್ತಮಾನಗಳನ್ನೂ ಕೇಳುವದರಲ್ಲಿಯೂ ಹೇಳುವುದರಲ್ಲಿಯೂ ಬಹಳ ಇಚ್ಚೆಯುಳ್ಳವರರಾಗಿದ್ದಾರೆ.' ಬೆಳಿಗ್ಗೆ ಬಂದ್ರದಲ್ಲಾಗಲಿ ಕಛೇರಿ ಹತ್ತರವಾಗಲಿ ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 59