Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/69

From Wikisource
This page has not been proofread.

ಕನ್ನಡ ಪತ್ರಿಕೋದ್ಯಮದ ಮೊದಲ ದಿನಗಳು ಭಾರತದಲ್ಲಿ ಪತ್ರಿಕೆಗೆ 237 ವರ್ಷಗಳ ಇತಿಹಾಸವಿದೆ. ಇಂಗ್ಲೆಂಡಿನಲ್ಲಿ ಪ್ರಥಮ ದೈನಿಕ ಆರಂಭವಾದ 80 ವರ್ಷಗಳ ನಂತರ ಅಂದರೆ 1780ರಲ್ಲಿ ಜೇಮ್ಸ್ ಹಿಕ್ಕೆ ಎಂಬಾತ 'ಬೆಂಗಾಲ್ ಗೆಜೆಟ್' ಎಂಬ ಪತ್ರಿಕೆಯೊಂದನ್ನು ಆರಂಭಿಸಿದ. ಇದನ್ನು ಭಾರತದ ಪ್ರಥಮ ಪತ್ರಿಕೆ ಎನ್ನುತ್ತಾರೆ. ಆಗಿನ ಎಲ್ಲ ಪತ್ರಿಕೆಗಳು ವಿದೇಶಿ ಆಡಳಿತಕ್ಕೆ ವಿರೋಧವನ್ನೇ ವ್ಯಕ್ತಪಡಿಸುತ್ತಿತ್ತು. ಒಂದು ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟದ ಪ್ರಮುಖ ಶಕ್ತಿಗಳಲ್ಲಿ ಪತ್ರಿಕೆ ಒಂದಾಗಿತ್ತು. ಆದ್ದರಿಂದಲೇ ಭಾರತದ ವೃತ್ತ ಪತ್ರಿಕೆಗಳ ಇತಿಹಾಸವು ಭಾರತದ ರಾಜಕೀಯ ಇತಿಹಾಸದೊಂದಿಗೆ ಸೇರಿಕೊಂಡಿದೆ. ಪ್ರಪಂಚದ ಪರಿವರ್ತನೆಯನ್ನು ಮಾಡಿರುವುದು ಮುದ್ರಣ. ಪಾಶ್ಚಾತ್ಯ ಪ್ರಪಂಚದಲ್ಲಿ ಮುದ್ರಣದ ಪ್ರಭಾವವು ಜನಜೀವನದ ಮೇಲೆ ಮೂರು-ನಾಲ್ಕು ಶತಮಾನಗಳಿಂದ ಉಂಟಾಗಿದ್ದರೂ ಭಾರತದಲ್ಲಿ ಒಂದೂವರೆ ಶತಮಾನದಷ್ಟು ಈಚಿನದು. ನಮಗೆ ಈ ಸೌಲಭ್ಯವನ್ನು ಒದಗಿಸಿ ಕೊಟ್ಟವರು ಪಾಶ್ಚಾತ್ಯರು. ಕ್ರೈಸ್ತ ಮತ ಪ್ರಚಾರಕ್ಕಾಗಿ ಬಂದ ಮಿಶನರಿಗಳು ಅಚ್ಚುಮೊಳೆಗಳನ್ನು ಉಪಯೋಗಿಸುವುದಕ್ಕೆ ಮುಂಚಿತವಾಗಿಯೇ ದೇಶೀಯ ಪದ್ಧತಿಗಳಾದ ಕಲ್ಲಿನ ಕೆತ್ತನೆ, ತಾಮ್ರಪತ್ರ ಬರಹಗಳಂತೆ ಕಲ್ಲಚ್ಚಿನ ಮುದ್ರಣವನ್ನು ದೇಶೀಯರೊಂದಿಗೆ ಬಳಕೆಗೆ ತಂದರು. ಪ್ರಚಾರ ಸಾಧನಗಳಲ್ಲಿ ಇವತ್ತಿಗೂ ಅತ್ಯಂತ ಪರಿಣಾಮಕಾರಿಯಾದದ್ದು ಪತ್ರಿಕೆ. ದೂರದರ್ಶನ, ರೇಡಿಯೋ, ಇಂಟರ್‌ನೆಟ್ ತಕ್ಷಣದ ಪರಿಹಾರವಾದರೂ ಪತ್ರಿಕೆಯ ಪ್ರಭಾವ ಕುಗ್ಗಿಲ್ಲ. ಪತ್ರಿಕೆ ಸಮಾಚಾರವೂ ಹೌದು, ರಂಜನೆಯೂ ಹೌದು. ಪತ್ರಿಕಾ ಸಾಮಾರ್ಥ್ಯದ ಈ ಮುಖ್ಯ ಲಕ್ಷಣವನ್ನು ಮನಗಂಡಿದ್ದ ಪಾಶ್ಚಾತ್ಯರು, ಕರ್ನಾಟಕದಲ್ಲಿ ವಿಶೇಷತ: ಕ್ರೈಸ್ತ ಮತ ಪ್ರಚಾರಕರು ಪತ್ರಿಕೆಗಳನ್ನು ಹುಟ್ಟುಹಾಕಿದರು. ಆದರ ಸಾಧ್ಯತೆಗಳನ್ನು, ಸಾಮರ್ಥ್ಯವನ್ನು ಇತರರು ಬಹುಬೇಕ ಗ್ರಹಿಸಿಕೊಂಡರು. ಕನ್ನಡ ನಾಡಿನಲ್ಲಿ ಪತ್ರಿಕೋದ್ಯಮವು ವೈವಿಧ್ಯಮಯವಾಗಿದೆ. ಬಹುತೇಕ ಪತ್ರಿಕೆಗಳು ಮಧ್ಯಮ ವರ್ಗದವರ ಅಭಿರುಚಿ ಅಕಾಂಕ್ಷೆಗಳ ಪ್ರತಿಬಿಂಬವಾಗಿದೆ. ವಿವಿಧ ಉದ್ದೇಶಗಳೊಂದಿಗೆ ಪ್ರಾರಂಭವಾದ ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... ಪ್ರಾರಂಭವಾದ ಪತ್ರಿಕೆಗಳು ಪತ್ರಿಕೆಗಳು ಪ್ರತಿ 57