Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/5

From Wikisource
This page has not been proofread.

ಮುನ್ನುಡಿ ತುಳುನಾಡಿನ ಚರಿತ್ರೆಯಲ್ಲಿ ಬಾಸೆಲ್ ಮಿಶನ್‌ನ ಪಾತ್ರವು ಬಹಳ ಮಹತ್ವದ್ದು. ಶಿಕ್ಷಣ, ಉದ್ಯೋಗ, ಕೈಗಾರಿಕೆ, ಮುದ್ರಣ, ಕೃಷಿ, ವೈದ್ಯಕೀಯ ಹೀಗೆ ಹಲವು ಕ್ಷೇತ್ರಗಳಲ್ಲಿ ಬಾಸೆಲ್ ಮಿಶನ್ ಸಂಸ್ಥೆಯು ಕಳೆದ 186 ವರ್ಷಗಳಲ್ಲಿ ಕೈಗೊಂಡಿರುವ ಕಾರ್ಯಗಳಿಗೆ ಒಟ್ಟು ಭಾರತೀಯ ಚರಿತ್ರೆಯಲ್ಲಿಯೇ ಪ್ರಮುಖ ಸ್ಥಾನವಿದೆ. ಬಾಸೆಲ್ ಮಿಶನ್ ಸಂಸ್ಥೆಯ ಕೊಡುಗೆಗಳ ಬಗ್ಗೆ ಎಂ.ಫಿಲ್, ಪಿ.ಎಚ್.ಡಿ ಪದವಿಗಳಿಗಾಗಿ ಅನೇಕ ಉತ್ತಮ ಸಂಶೋಧನೆಗಳು ನಡೆದಿವೆ. ಸ್ನಾತಕೋತ್ತರ ಪದವಿಯ ಅವಶ್ಯಕತೆಗಾಗಿ ಪೂರಕ ಪ್ರಬಂಧಗಳೂ ರೂಪುಗೊಂಡಿವೆ. ಸಾಹಿತ್ಯ, ಸಂಸ್ಕೃತಿ ಕ್ಷೇತ್ರಗಳಿಗೆ ವಿಭಿನ್ನ ಆಯಾಮವನ್ನು ನೀಡಬಲ್ಲ, ಇನ್ನೂ ಸಂಶೋಧನೆ ನಡೆಯಬೇಕಾದ ಹಲವಾರು ವಿಷಯಗಳು ಬಾಸೆಲ್ ಮಿಶನ್ ಸಂಬಂಧೀ ಕ್ಷೇತ್ರದಲ್ಲಿವೆ. ಇಂದು ಬಾಸೆಲ್ ಮಿಶನ್‌ಗೆ ಸಂಬಂಧಿಸಿದ ಸಂಶೋಧನೆಗಳ ಸಂದರ್ಭದಲ್ಲಿ ಮೊದಲ ಸಾಲಿನಲ್ಲಿ ನೆನಪಿಗೆ ಬರುವ ಹೆಸರು ಮಿತ್ರರಾದ ಶ್ರೀಯುತ ಬೆನೆಟ್ ಜಿ. ಅಮ್ಮನ್ನರವರದು. ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಅವರು ಕಳೆದ 38 ವರ್ಷಗಳಿಂದ ಗ್ರಂಥಾಲಯ ಮತ್ತು ಪತ್ರಾಗಾರದಲ್ಲಿ ಸೇವೆ ಸಲ್ಲಿಸುತ್ತಿರುವವರು. ತಮ್ಮ ನಿರಂತರ ಅಧ್ಯಯನದ ಮೂಲಕ ನೂರಾರು ಸಂಶೋಧಕರಿಗೆ ನೆರವಾಗಿ ಮೂಲ ಅಕರಗಳನ್ನು ಒದಗಿಸಿಕೊಟ್ಟು ಹೊಸ ಹೊಳಹುಗಳಿಗೆ ಕಾರಣರಾದವರು. ಬೆನೆಟ್‌ರವರು ಕಳೆದ ಮೂರು ದಶಕಗಳಿಂದ ತಮ್ಮ ಬರವಣಿಗೆಯ ಮೂಲಕ ಅನೇಕ ಮಹತ್ವದ ಆಕರಗಳನ್ನು ದಾಖಲಿಸಿ ಪ್ರಕಟಿಸುತ್ತಾ ಬಂದಿದ್ದಾರೆ. ಹಲವಾರು ವಿದ್ವತ್ ಲೇಖನಗಳನ್ನೂ, ಪುಸ್ತಕಗಳನ್ನು ನೀಡಿದ್ದಾರೆ. ಅವರು ಪತ್ರಾಗಾರದಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ದಾಖಲೀಕರಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾ ಬಂದಿದ್ದಾರೆ. ಸಮಗ್ರ ಮಾಹಿತಿಯಿಲ್ಲದ ವಿಭಾಗಗಳನ್ನು ಗುರುತಿಸಿ ಅವುಗಳನ್ನು ಸಂಶೋಧಕರಿಗೆ ದೊರಕಿಸಿಕೊಡುವ ಬಗ್ಗೆ, ಅದನ್ನು ದಾಖಲೀಕರಣ ಮಾಡುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಕನ್ನಡ ತುಳು ಸಾಹಿತ್ಯಕ್ಕೆ ವಿದೇಶಿಯರ ಕೊಡುಗೆ, V