Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/35

From Wikisource
This page has been proofread.

ಕಾರ್ಯದರ್ಶಿಯಾಗಿದ್ದ ರೆವೆ. ಡಾ. ಸಿ.ಡಿ. ಜತ್ತನ್ನರವರ ಮುಂದಾಳತ್ವದಲ್ಲಿ ಈ ಕಟ್ಟಡದ ಒಂದು ಭಾಗದಲ್ಲಿ ನೇಯಿಗೆ ಕಾರ್ಖಾನೆ (Balmatta Hosairy Industry)ಯನ್ನು ಪ್ರಾರಂಭಿಸಲಾಯಿತು. 1982 ತನಕ ಮಗ್ಗ ಮತ್ತು ಹೊಸ ಅವಿಷ್ಕಾರದ ನೇಯಿಗೆ ಕೆಲಸಗಳು ಇಲ್ಲಿ ನಡೆಸಲಾಗುತ್ತಿದ್ದು ಇದರ ಮಾರಾಟಕ್ಕಾಗಿ ಬಲ್ಮಠ ಗಾರ್‌ಮೆಂಟ್ ಶಾಪ್ (Balmatta Garment Shop) ವ್ಯವಸ್ಥೆಯೂ ಇತ್ತು.Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/35/br

ಎರಡನೆಯದಾಗಿ ಇವರು ಕೈಗೊಂಡ ಕಾರ್ಯ ಬಾಸೆಲ್ ಮಿಶನ್ ಪ್ರೆಸ್‌ನ್ನು ಬಲ್ಮಠ ಮಾಸ್ಟರ್ ಪ್ರೆಸ್ (Balmatta Master Press) ಆಗಿ ಮರು ಸ್ಥಾಪನೆ ಮಾಡಿದ್ದು. ಬಾಸೆಲ್ ಮಿಶನ್ ಪ್ರೆಸ್‌ನಲ್ಲಿದ್ದ ಎಲ್ಲಾ ಯಂತ್ರಗಳನ್ನು ಪಡೆದುಕೊಂಡು, ಸುಸ್ಥಿತಿಯಲ್ಲಿರುವ ಎಲ್ಲಾ ಯಂತ್ರಗಳನ್ನು ಉಪಯೋಗಿಸಿ ಅದೇ ಮಟ್ಟದಲ್ಲಿ ಪ್ರೆಸ್ ಮುಂದುವರಿಯಬೇಕೆಂಬ ದೃಷ್ಟಿಯಿಂದ ಮೈಸೂರಿನಲ್ಲಿದ್ದ ವೆಸ್ಲಿಯನ್ ಮಿಶನ್ ಪ್ರೆಸ್‌ನಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದ ಶ್ರೀ ಕೆ. ಎ. ಕುರುವಿಲ್ಲರವರನ್ನು ಕರೆತಂದು ಹಿಂದಿನ ಪ್ರೆಸ್‌ನಲ್ಲಿದ್ದ ಹಲವು ನೌಕರರ ಸಹಕಾರದೊಂದಿಗೆ 1972ರಲ್ಲಿ 'ಬಲ್ಮಠ ಮಾಸ್ಟರ್ ಪ್ರೆಸ್' ಎಂಬ ಹೆಸರಿನೊಂದಿಗೆ ಆರಂಭವಾಯಿತು. 1976ರಿಂದ ಮುದ್ರಣ ಕ್ಷೇತ್ರದಲ್ಲಿ ಅನುಭವಿ ಶ್ರೀ ಮಾಮನ್ ಪಿಲಿಪ್ಪ ಎಂಬವರು ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದಾರೆ. 1980 ತನಕ ಮರುಸ್ಥಾಪನೆಗೊಂಡ ಪ್ರೆಸ್ ಉನ್ನತ ಮಟ್ಟದಲ್ಲಿ ಬೆಳೆಯಲು ಈ ಇಬ್ಬರೂ ಮ್ಯಾನೇಜರ್ ಕಾರಣರಾಗಿದ್ದಾರೆ. ಇವರ ಅವಧಿಯಲ್ಲಿ ಮನೋಟೈಪ್ ಮುಂತಾದ ಹಲವು ಯಂತ್ರಗಳನ್ನು ತರಿಸಿದ್ದು, ಬೈಂಡಿಂಗ್ ಮತ್ತು ಪ್ರಿಂಟಿಂಗ್ ತರಬೇತಿಯನ್ನು ನೀಡಲು ವ್ಯವಸ್ಥೆ ಕಲ್ಪಿಸುವ ದೃಷ್ಟಿಯಲ್ಲಿ ಪ್ರೆಸ್‌ನ ಹೆಸರನ್ನು ಬಲ್ಮಠ ಇನ್ಸಿಟ್ಯೂಟ್ ಆಫ್ ಪ್ರಿಂಟಿಂಗ್ ಟೆಕ್ನಾಲಜಿ ಎಂಬುದಾಗಿ ಬದಲಾಯಿಸಲಾಗಿತ್ತು. ಇದರಿಂದ ಉತ್ತಮ ಗುಣಮಟ್ಟದ ಮುದ್ರಣ ವ್ಯವಸ್ಥೆ ಪ್ರಾರಂಭವಾಗಿ ಬಾಸೆಲ್ ಮಿಶನ್ ಪ್ರೆಸ್‌ನ ಮುಂದುವರಿದ ಭಾಗಕ್ಕೆ ಹೆಜ್ಜೆಯಿಡುವಂತಾಯಿತು. ಪ್ರಸ್ತುತ ಇರುವ ಕಟ್ಟಡವನ್ನು 1907ರಲ್ಲಿ ಬಾಸೆಲ್ ಮಿಶನ್ ನೇಯಿಗೆ ಕಾರ್ಖಾನೆಗಾಗಿ ನಿರ್ಮಿಸಿದ್ದು, ಇದಕ್ಕೆ ಹೊಂದಿಕೊಂಡೇ 1914ರ ನಂತರ ಕಾಮನ್‌ವೆಲ್‌ನವರು ನಡೆಸುತ್ತಿದ್ದ ನೇಯಿಗೆ ಕಾರ್ಖಾನೆ ಉದ್ದೇಶಕ್ಕಾಗಿ ವಿಸ್ತರಿಸಿದ್ದ ಕಟ್ಟಡ 1970ರ ನಂತರ ಕಾಸೆಸ್ ಸಂಸ್ಥೆಯು ಅದೇ ಕಟ್ಟಡದಲ್ಲಿ ನೇಯಿಗೆ ವಿಭಾಗವನ್ನು ಮುಂದುವರಿಸುತ್ತಿತ್ತು. ಪ್ರಸ್ತುತ ಕಟ್ಟಡದಲ್ಲಿ ಬಾಸೆಲ್ ಮಿಶನ್ ಪ್ರೆಸ್‌ನ ಹಳೆ ಮುದ್ರಣ ಯಂತ್ರಗಳು, ಅಚ್ಚುಮೊಳೆಗಳ ಸಂಗ್ರಹಗಳನ್ನು ಕಾಪಿಡಲಾಗಿದೆ.Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/35/br

WEIGLE, PLEBST, STOLZ, REUTHER, SIKEMEIR, HIRNER,

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 23