Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/30

From Wikisource
This page has been proofread.

ಹೆಚ್ಚಾದಾಗ ಹೆಚ್ಚು ಪ್ರತಿಗಳನ್ನು ಮುದ್ರಿಸುವುದಕ್ಕಾಗಿ ಬಳ್ಳಾರಿ ಮಿಶನ್ ಪ್ರೆಸ್‌ನಲ್ಲಿ ಮುದ್ರಿಸಲು ಪ್ರಾರಂಭವಾಯಿತು. ಕೇವಲ ನಾಲ್ಕು ಪುಟಗಳ ಪತ್ರಿಕೆಯಾದರೂ ಬೇಡಿಕೆ ಹೆಚ್ಚಾದ್ದರಿಂದ ಹೆಚ್ಚು ಪ್ರತಿಗಳನ್ನು ಮುದ್ರಿಸಬೇಕಾಗಿತ್ತು. ಆದರೆ ಕಲ್ಲಚ್ಚು ಮುದ್ರಣದಲ್ಲಿ ಹೆಚ್ಚು ಪ್ರತಿಗಳನ್ನು ಮುದ್ರಿಸಲು ಅಸಾದ್ಯವಾದ್ದರಿಂದ ಬಳ್ಳಾರಿ ಮಿಶನ್ ಪ್ರೆಸ್‌ನಲ್ಲಿ ಮುದ್ರಿಸಿ ತರಲಾಗುತ್ತಿತ್ತು. ಆಗ ತೆಲುಗು ಮತ್ತು ಕನ್ನಡಕ್ಕೆ ಒಂದೇ ಅಚ್ಚುಮೊಳೆಗಳನ್ನು ಬಳಸಿ ಕನ್ನಡ ಮುದ್ರಿಸುತ್ತಿದ್ದರು. ಈ ಪತ್ರಿಕೆಗೆ “ಕನ್ನಡ ಸಮಾಚಾರ” ಎಂಬ ಹೆಸರಾಯಿತು.( 1844 ಜೂನ್-1844 ನವೆಂಬರ್) 1857ರಲ್ಲಿ ಬಂದ ಕನ್ನಡ ವಾರ್ತಿಕ ಅಚ್ಚಿನ ಮೊಳೆಗಳನ್ನು ಬಳಸಿ ಮೊದಲು ಪ್ರಕಟವಾದ ಪತ್ರಿಕೆಯಾಗಿದೆ. 1862ರಲ್ಲಿ ಬಾಸೆಲ್ ಮಿಶನ್‌ನಿಂದ ಪ್ರಕಟವಾಗುತ್ತಿದ್ದ ಮತ್ತೊಂದು ಪತ್ರಿಕೆ ವಿಚಿತ್ರ ವರ್ತಮಾನ ಸಂಗ್ರಹ, 'ಯಾಕೆ ಈ ವಿಚಿತ್ರ ಹೆಸರು ಎಂದು ನೆನಸಬಹುದು. ಇದು ಸುಂದರ ಚಿತ್ರಗಳನ್ನು ಒಳಗೊಂಡು ಪ್ರಕಟವಾಗುತ್ತಿತ್ತು. ವೂರ ವರ್ತಮಾನಗಳು, ಬುದ್ಧಿಯ ಕತೆಗಳು, ವಿವಿಧ ಲೇಖನಗಳು, ಚಿತ್ರಗಳನ್ನು ಹೊತ್ತು ಬರುತ್ತಿದ್ದ ಕನ್ನಡದ ಪ್ರಪ್ರಥಮ ಪತ್ರಿಕೆ ಇದೇ' ಎಂದು ಡಾ. ಹಾವನೂರರು ಸಂಪಾದಿಸಿದ ಕರ್ನಾಟಕ ಪತ್ರಿಕಾ ಸೂಚಿಯಲ್ಲಿ ಬರೆಯುತ್ತಾರೆ. ಕನ್ನಡ ಪಂಚಾಂಗ ಎಂಬ ವಾರ್ಷಿಕ ಪತ್ರಿಕೆಯು 1853-1936 ರ ತನಕ ಬಾಸೆಲ್ ಮಿಶನ್ ಪ್ರೆಸ್‌ನಿಂದ ಪ್ರಕಟವಾಗುತ್ತಿತ್ತು. ಅಲ್ಲದೆ ವ್ಯವಸಾಹಿಕ ಪಂಚಾಂಗ ಎಂಬ ವರ್ಷ ಪತ್ರಿಕೆಯೂ ಇತ್ತು. ಇದರಲ್ಲಿ ಜಿಲ್ಲೆಗೆ ಸಂಬಂಧಪಟ್ಟ ಸರಕಾರಿ ಉದ್ಯೋಗಸ್ತರು, ತುಳು ಗಾದೆಗಳು, ಸರಕಾರಿ ವಿಚಾರಗಳು ಮುಂತಾದ ಹಲವಾರು ವಿಚಾರಗಳು ಪ್ರಕಟವಾಗುತಿತ್ತು. ಸತ್ಯದೀಪಿಕೆ(1896-1915) ಇದು ಕ್ರೈಸ್ತ ಸಭಾ ವಾರ್ತೆಗಳನ್ನು ಪ್ರಕಟಿಸುತ್ತಿದ್ದ ಪತ್ರಿಕೆಯಾಗಿದ್ದರೂ ದೇಶಿಯ ಬರಹಗಾರರ ಬರವಣಿಗೆಗಳು ಈ ಪತ್ರಿಕೆಯಲ್ಲಿ ಬರುತ್ತಿತ್ತು. ಕರ್ನಾಟಕ ಕ್ರೈಸ್ತಬಂಧು(1932-1939) ಕ್ರೈಸ್ತ ಸಭಾಪತ್ರ(1867-1895) ಕ್ರೈಸ್ತ ಹಿತವಾದಿ(1924-1932) ವೈದಿಕ ಮಿತ್ರ(1910-1914) ಬಾಲಪತ್ರ(1869- 1871) ಬಾಲೋಪದೇಶಕ (1939-1995) ನ್ಯಾಯಸಂಗ್ರಹ (1868) ಸುಭೋಧಿನಿ (1871) ಯುವಜನ ವಾರ್ತೆ(1952) 1968ರಲ್ಲಿ ಪ್ರಾರಂಭವಾದ 'ಪ್ರಭೋಧವಾಣಿ' ಎಂಬ ತ್ರೈಮಾಸಿಕ ಪತ್ರಿಕೆ ಈಗಲೂ ಮುಂದುವರೆದು 'ಸುಭೋಧವಾಣಿ' ಎಂಬ ಹೆಸರಿನಿಂದ ಪ್ರಕಟಿಸಲ್ಪಡುತ್ತಿದೆ. UBMC Proceedings 1937-1967, Official Gazette of of BEMGMI in German (1891) Basel Mission Report (1853-1914) UBMC Synod (1936-1968) ಮುಂತಾದ ವರದಿಗಳಲ್ಲದೆ ಸರಕಾರಿ ಕಾಲೇಜು, ಸಂತ ಎಲೋಸಿಯಸ್ ಕಾಲೇಜು,Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/30/br

18 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...