Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/27

From Wikisource
This page has been proofread.

ಒದಗಿಸಿಕೊಟ್ಟ ಶ್ರೇಯಸ್ಸು ಬಾಸೆಲ್ ಮಿಶನ್‌ ಪ್ರೆಸ್‌ನದು.Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/27/br

ಅಲ್ಲದೆ ಬಾಸೆಲ್ ಮಿಶನ್ ಪ್ರಕಾಶನ ಸಂಸ್ಥೆಗಾಗಿ- ಕ್ರೈಸ್ತ ಧರ್ಮ ಸಾಹಿತ್ಯ ಸತ್ಯವೇದ, ಸಂಗೀತ, ದಾಸ ಸಾಹಿತ್ಯ, ನಿಘಂಟು, ವ್ಯಾಕರಣ, ಕೃಷಿ, ಖಗೋಳ, ವಿಜ್ಞಾನ, ಪ್ರಾಥಮಿಕ ಪಠ್ಯ, ಪತ್ರಿಕೆಗಳು, ಸ್ಮರಣ ಸಂಚಿಕೆಗಳು, ವರದಿಗಳು, ಸರಕಾರಿ ಕಾಯಿದೆಗಳು, ಚರಿತ್ರೆ, ಭೂತಾರಾಧನೆ, ಸಂಸ್ಕೃತಿ, ಶಾಸನಗಳು ಮುಂತಾದ ವಿಭಾಗಗಳಲ್ಲಿ ಪ್ರಕಟಿಸಿದ ಕ್ರೈಸ್ತ ಸಭಾ ಚರಿತ್ರ(1870), ಯಜ್ಞಸುಧಾನಿಧಿ(1872), ಇಂಗ್ಲಾಂಡ್ ದೇಶದ ಚರಿತ್ರವು(1863), ಕಥಾಮಾಲೆ(1862), ಕಾಟಕ ಕಾವ್ಯಮಾಲೆ(1874), ಕಾವ್ಯಮಂಜರಿ(1877), ನಾಗವರನ ಕನ್ನಡ ಛಂದಸ್ಸು (1875), ಪರಮಾತ್ಮ ಜ್ಞಾನ (1863), ಯೇಸು ಕ್ರಿಸ್ತನ ಶ್ರಮೇಚರಿತ್ರ(1859), ಶಬ್ದಮಣಿದರ್ಪಣ(1872), ಶಾಲಾ ನಿಘಂಟು(1899), ಸಣ್ಣ ಕರ್ಣಾಟಕ ಕಾವ್ಯಮಾಲೆ(1865), ಕನ್ನಡ ಇಂಗ್ಲಿಷ್ ನಿಘಂಟು(1894), ಕನ್ನಡ ವ್ಯಾಕರಣ(1903), ಮನ್ನರ್‌ರವರ ಪಾಡ್ಡನೊಲು (1886), ಮೆಲೋಡಿಯನ್ (1881), ತುಳು ಇಂಗ್ಲಿಷ್ ನಿಘಂಟು (1886), ಇಂಗ್ಲಿಷ್ ತುಳು ನಿಘಂಟು(1888) ಬ್ರಿಗೆಲ್‌ ತುಳು ವ್ಯಾಕರಣ(1872), ಕ್ರಿಸ್ತಾನುಜ ವತ್ಸ ಮತ್ತು ಪಂಜೆ ಮಂಗೇಶರಾಯರ-ಲಘುಕೋಶ(1910), ಜೀಗ್ಲರನ ಶಾಲಾ ನಿಘಂಟು(1876), ಜೆ.ಗ್ಯಾರೆಟ್‌ನ ಕನ್ನಡ ನಿಘಂಟು(1845), ಕೊಂಕಣಿ ನಿಘಂಟು(1883), ಗುಂಡರ್ಟ್‌ ಮಲಯಾಳಂ ನಿಘಂಟು(1872), ಕಿಟೆಲ್‌ನ ಕನ್ನಡ ನಿಘಂಟು (1894), ಕನ್ನಡ ಬಾಲವ್ಯಾಕರಣ(1859), ಕನ್ನಡ ಮೂಲವ್ಯಾಕರಣ(1905), ನೂತನ ಬಾಲ ವ್ಯಾಕರಣ(1951), ಕನ್ನಡ ವ್ಯಾಕರಣ ಸಾರವು(1854), ಕನ್ನಡ ಶಾಲಾ ವ್ಯಾಕರಣ(1866), ಅರಶಾಸ್ತ್ರದ ಮೂಲ ತತ್ವಗಳು(1890), ಇಂಡ್ಯನ್ ಪೇನಲ್ ಕೋಡಿನ ಸಾರಾಂಶ(1869), ಇಸೋಪನ ನೀತಿಕತೆಗಳು(1862), ಕನ್ನಡ ಗಾದೆಗಳು ತತ್ಸಮಾನ ಇಂಗ್ಲೀಷ್ ಗಾದೆಗಳು(1903), ಕನ್ನಡ ಇಂಗ್ಲಿಷು ಭಾಷಾಮಂಜರಿ(1909), ಅಕಬರ ಬೀರಬಲರ ಕಥೆಗಳು(1893), ಬಾಲಶಿಕ್ಷೆಯು (1854), ಅನುಕೂಲ ದಾಂಪತ್ಯ (1902), ಕನ್ನಡ ಬಾಲವ್ಯಾಕರಣ (1859), ಕಾಯಿದೆಗಳು (1887), ಕ್ಷೇತ್ರಫಲ ಘನಫಲ(1894), ಗ್ರಹವ್ಯವಸ್ಥೆಯೂ ಆರೋಗ್ಯ ಶಾಸ್ತ್ರವೂ(1894), ಗ್ರಹಗಳೆ೦ದರೇನು(1884), ಗ್ರಹಗಳಾಗುವುದು ಹ್ಯಾಗೆ (1884), ಗ್ರಹಧರ್ಮಾನುಶಾಸನ(1894), ಗ್ರೇಟ್ ಬ್ರಿಟನ್‌ದವರು ಯುದ್ಧದಲ್ಲಿ ಯಾಕೆ ತೊಡಗಿದರು(1915), ಚುಕ್ಕಿಗಳು ಬಾಲಚುಕ್ಕಿಗಳು(1884), ಜೀವರಸಾಯಿನಿ ವೈದ್ಯಸಾರ(1903), ಮದ್ರಾಸ್ ಹೈಕೋರ್ಟಿನವರ ನಿಬಂಧನೆಗಳು(1869),Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/27/br

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 15