Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/23

From Wikisource
This page has been proofread.

(1845). ನೀತಿಪಾಠಗಳು(1848) ಮೋಗ್ಲಿಂಗ್‌ರವರ-ಮಂಗಳೂರು ಸಮಾಚಾರ(1843), ಚನ್ನಬಸವ ಪುರಾಣ (1851), ಜೈಮಿನಿ ಭಾರತ (1848), ತೊರವೆ ರಾಮಾಯಣ, ಕುಮಾರವ್ಯಾಸ ಭಾರತ, ದಾಸರ ಪದಗಳು(1850), ಬಸವ ಪುರಾಣ (1850), ಕನಕದಾಸರ ಭಕ್ತಿಸಾರ(1850), ರಾವಣ ದಿಗ್ವಿಜಯ (1848), ಕನ್ನಡ ಗಾದೆಗಳು(1847), ಹೃದಯ ದರ್ಪಣ(1850), ಜಾತಿ ವಿಚಾರಣೆ (1845), ದೇಶಾಂತ್ರಿಯ ಪ್ರಯಾಣ(1849), ಮತ ವಿಚಾರಣೆ (1845) ಮೊದಲಾದ ಬೃಹತ್ ಗ್ರಂಥಗಳು, ಪಠ್ಯ ಪುಸ್ತಕಗಳು, ಶಾಲೆಗಳ ಉಪಯೋಗಕ್ಕಾಗಿ ಭೂಪಟಗಳು ಕಲ್ಲಚ್ಚಿನಿಂದ ಮುದ್ರಣಗೊಂಡವು. ಆಗ ಈ ಪ್ರೆಸ್‌ಗೆ 'ಜರ್ಮನ್ ಮಿಶನ್ ಪ್ರೆಸ್ ಎಂದು ಕರೆಯಲಾಗುತ್ತಿತ್ತು. ಮುಂಬಾಯಿ ಸರಕಾರದವರು ತಮ್ಮ ಆಡಳಿತದ ಶಾಲೆಗಳಿಗೆ ಬೇಕಾದ ಪಠ್ಯ ಪುಸ್ತಕಗಳನ್ನು ಅಚ್ಚು ಹಾಕಿಸುವುದಕ್ಕೂ ಮದ್ರಾಸ್ ಸರಕಾರದವರು ತಮ್ಮ ಪತ್ರಾಗಾರದಲ್ಲಿದ್ದ ದಾಸ ಸಾಹಿತ್ಯಗಳಂತಹ ಕನ್ನಡ ಗ್ರಂಥ ಹಸ್ತಪ್ರತಿಗಳಿಂದ ಅಚ್ಚು ಹಾಕಿಸಲು ಬಾಸೆಲ್ ಮಿಶನ್ ಮುದ್ರಣಾಲಯವನ್ನೇ ಆರಿಸಿಕೊಂಡರು. ಈ ಮುದ್ರಣಾಲಯದಲ್ಲಿ ಕನ್ನಡ ಲಿಪಿಯನ್ನು ತುಳು ಭಾಷೆಗೆ ಬಳಸಿದ್ದು ಮಾತ್ರವಲ್ಲ, ಬಡಗ, ಕೊಡವ, ಕೊಂಕಣಿ ಭಾಷೆಗಳಲ್ಲಿಯೂ ಪುಸ್ತಕಗಳನ್ನು ಮುದ್ರಿಸಿ ಪ್ರಕಟಿಸಿದರು. ಇದರಿಂದ ಏಕೀಕೃತ ಕರ್ನಾಟಕ ಪ್ರಾಂತ್ಯದಿಂದ ಈ ಅಚ್ಚ ಕನ್ನಡಿಗರು ಸಿಡಿದು ಹೋಗದಂತೆ ಮುಂಜಾಗ್ರತೆಯನ್ನು ತೆಗೆದುಕೊಂಡ ಪ್ರಶಂಸೆ ಜರ್ಮನ್ ಮಿಶನರಿಗಳಿಗೆ ಸೇರಬೇಕು.Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/23/br

1851 ಭಾರತಕ್ಕೆ ಬಂದ Charles George Andrew Plebst ಎಂಬವರ ನಾಯಕತ್ವದಲ್ಲಿ ಇಲ್ಲಿ ಲೆಟರ್ ಪ್ರೆಸ್‌ನ ಸ್ಥಾಪನೆಗೆ ತಯಾರಿಗಳು ನಡೆದವು. ವಿದೇಶದಿಂದ ಹೊಸ ಮುದ್ರಾಕ್ಷರ ಯಂತ್ರಗಳು ಅಚ್ಚು ಮೊಳೆಗಳು ತರಿಸಲ್ಪಟ್ಟವು. ಮಾತ್ರವಲ್ಲದೆ 1852ರಿಂದ ಅಕ್ಷರ ಮೊಳೆಗಳನ್ನು ಉಪಯೋಗಿಸಿ ಮುದ್ರಣಗೊಳ್ಳುವ ಕಾರ್ಯ (Typography) ಆರಂಭವಾಯಿತು. ಮೊತ್ತಮೊದಲು ಅಕ್ಷರಗಳನ್ನು ಕೆತ್ತಲು ಮಂಗಳೂರಿನವರೇ ಆದ ಪಾಂಡುರಂಗ ಶೆಟ್‌ರವರನ್ನು ನೇಮಿಸಿಕೊಂಡರು. ಫೆಬ್‌ರಿಂದ ಮುದ್ರಣದಲ್ಲಿ ತರಬೇತಿ ಪಡೆದ ಟೋಮಿ ಲುಕ್ಲಿನ್ (Tomy Lucklin) ಪ್ರೆಸ್‌ಗೆ ಸೇರ್ಪಡೆಯಾದನು. ಉತ್ತಮ ನೌಕರನಾಗಿದ್ದ ಈತ 1865ರ ತನಕ ಸೇವೆಯಲ್ಲಿದ್ದು ನಿಧನವಾದಾಗ ಬಾಸೆಲ್ ಮಿಶನ್ ವರದಿಯಲ್ಲಿ ಹೀಗೆ ದಾಖಲಿಸಲಾಗಿದೆ: “The Establishment suffered a severe loss by the death of Tommy Lucklin, headman of the Type -Foundry, whoPage:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/23/br

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 11