Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/216

From Wikisource
This page has not been proofread.

ಪುಸ್ತಕ ಪ್ರೀತಿ, ಸಂಗ್ರಹ ಯಾಕೆ ಹೇಗೆ ? ಗ್ರಂಥವಿಲ್ಲದ ಕೋಣೆ ಆತ್ಮವಿಲ್ಲದ ದೇಹವಿದ್ದಂತೆ- ಸಿಸಿರೋ ಶಾಸನಗಳು ಸಾಯುತ್ತವೆ ಗ್ರಂಥಗಳಿಗೆ ಸಾವಿಲ್ಲ- ಬುಲ್‌ವರ್ ಲಿಟ್ಟನ್ ಸುಖವನ್ನು ಸಂಗ್ರಹಿಸಬೇಕಾದರೆ ಪುಸ್ತಕವನ್ನು ಸಂಗ್ರಹಿಸು- ಎ. ಸ್ಟಾರೆಟ್ ಒಳ್ಳೆಯ ಪುಸ್ತಕಗಳ ಸಂಗ್ರಹವೇ ಒಂದು ವಿಶ್ವವಿದ್ಯಾಲಯ- ಥಾಮಸ್‌ ಕಾಲ್‌ರೈಟ್ ಪುಸ್ತಕವನ್ನು ನಿಜವಾಗಿ ಪ್ರೀತಿಸುವವರಿಗೆ ಒಳ್ಳೆಯ ಸ್ನೇಹಿತರ ಅಗತ್ಯ ಕೂಡಾ ಇಲ್ಲ-ಬರೋ ಮಾನವ ಕುಲದ ಇತಿಹಾಸದಷ್ಟೇ ಗ್ರಂಥಗಳ ಇತಿಹಾಸವೂ ಪ್ರಾಚೀನವಾದುದು. ಬೇಟೆ ಮಾಡುತ್ತಿದ್ದ ಸಹಪಾಠಿಗಳೊಂದಿಗೆ ಮಾತನಾಡಲು ಭಾಷೆ ಇರಲಿಲ್ಲ. ತನ್ನ ఆది ಮಾನವನಿಗೆ ಸಂಜೆಯಿಂದಲೇ ಅವನ ವಿಚಾರ ವಿನಿಮಯ ಆಗುತ್ತಿತ್ತು. ತಾನು ಕಂಡ ಭಾವನೆಗಳನ್ನು ಗುಹೆಗಳ ಗೋಡೆಯ ಮೇಲೆ, ಮರದ ತೊಗಟೆಯ ಮೇಲೆ ಮೂಡಿಸಲು ಪ್ರಾರಂಭಿಸಿದ. ಅವುಗಳು ಹೆಚ್ಚಾಗಿ ಚಿತ್ರಗಳಾಗಿದ್ದವು. ಆ ಚಿತ್ರಗಳೇ ಅಕ್ಷರ ವಿಚಾರಗಳಾಗಿ ಭಾಷೆಯ ಉಗಮವಾಯಿತು. ಮೊದಲು ಚಿತ್ರರೂಪವಾಗಿ ಜನ್ಮತಳೆದ ಲಿಪಿ ಅಕ್ಷರ ಮಾಲೆಯಾಗಿ ಬೆಳೆದು ಬಂದಿತು. ಕಾಲಕ್ರಮೇಣ ಜಗತ್ತಿನ ಜ್ಞಾನವನ್ನು ಸಂಗ್ರಹಿಸಿ ಬಿತ್ತರಿಸುವಲ್ಲಿ ಸಹಾಯಕವಾಯಿತು. ವೇದಗಳ ಕಾಲದಲ್ಲಿ ಜ್ಞಾನಪ್ರಸಾರವು ತಂದೆಯಿಂದ ಮಗುವಿಗೆ, ಗುರುವಿನಿಂದ ಶಿಷ್ಯನಿಗೆ ಬಾಯಿಂದ ಬಾಯಿಗೆ ಆಗುತ್ತಿತ್ತು. ಜನಸಾಮಾನ್ಯರಿಗೆ ಗ್ರಂಥರೂಪದಲ್ಲಿ ಜ್ಞಾನ ಸಂಗ್ರಹಿಸುವ ಅವಶ್ಯಕತೆ ಕಂಡು ಬರಲಿಲ್ಲ. ಆದರೆ ಜ್ಞಾನದ ರಾಶಿ ಬೆಳೆಯುತ್ತಾ ಹೋಯಿತು. ಎಲ್ಲವನ್ನೂ ನೆನಪಿನಲ್ಲಿಡಲು ಸಾದ್ಯವಾಗಲಿಲ್ಲ. ನೆನಪಿನ ಶಕ್ತಿ ಕೈಕೊಟ್ಟಾಗ ಯಾವುದಾದರೂ ಒಂದು ಸಾಧನದ ಮೇಲೆ ಅದನ್ನು ಮೂಡಿಸಲು ಪ್ರಯತ್ನಿಸಿದ. ಆಗ ಶಿಲೆ, ಇಟ್ಟಿಗೆ, ಚರ್ಮ, ತೊಗಟೆ, ತಾಡ ಓಲೆ, ತಾಮ್ರ ಮುಂತಾದವುಗಳನ್ನು ಬಳಸಿ ಅವುಗಳಲ್ಲಿ ಜ್ಞಾನದ ನಿಧಿಯನ್ನು ಸಂಗ್ರಹಿಸಿದ. 204 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...