Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/184

From Wikisource
This page has not been proofread.

ನವೆಂಬರ್ 17, ಹೀಗೆ 13 ಬೇರೆ ಬೇರೆ ತಾರೀಕುಗಳಲ್ಲಿ ಕ್ರಿಸ್ತನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಆದರೆ ಎಲ್ಲಿಯ ಡಿಸೆ೦ಬರ್ 25ರ೦ದು ಆಚರಿಸುತ್ತಿದ್ದಾರೆಂಬುದಕ್ಕೆ ಪುರಾವೆಗಳು ಕಂಡುಬರುವುದಿಲ್ಲ. ಕ್ರಿ.ಶ. 361ರಲ್ಲಿ ಪೋಪ್ತರಾಗಿದ ಜೂಲಿಯಸ್‌ ಎಂಬವರು ಡಿಸೆಂಬ‌ 25ನ್ನು ಕ್ರಿಸ್ತನ ಜನನದ ದಿನವನ್ನಾಗಿ ನೇಮಿಸಿದರು. ಕ್ರಿ. ಶ. 500ರಲ್ಲಿ ಅದನ್ನು ಹೆಚ್ಚಿನ ಸಭೆಗಳು ಜಾರಿಗೆ ತಂದವು. ಆದರೂ ಈ ದಿನಾಂಕವನ್ನು ಒಪ್ಪದೆ ಗ್ರೀಕಿನ ಅರ್ಥೊಡಕ್ಸ್ ಮತ್ತು ಅಮೇರಿಕದ ಸಭೆಗಳು ಕ್ರಿಸ್ತನ ಹುಟ್ಟು ಹಬ್ಬವನ್ನು ಜನವರಿ 6 ಮತ್ತು ಜನವರಿ 18ಕ್ಕೆ ಆಚರಿಸುತ್ತಿದ್ದರು. ಆದರೆ ಇಂಗ್ಲಿಷ್ ಭಾಷೆ ಇರುವ ದೇಶಗಳು ಮತ್ತು ರೋಮನ್ ಕೆಥೋಲಿಕರ ಪ್ರಭಾವವಿರುವ ಎಲ್ಲಾ ಸಭೆಗಳು ಡಿಸೆಂಬರ್ 25ರಂದೇ ಈ ಹಬ್ಬವನ್ನು ಆಚರಿಸುತ್ತಿದ್ದರು. ಲಿಬಿಸಿಯಾ ಹಿಂಬಾಲಕರು ಏಸುವಿನ ಹುಟ್ಟುಹಬ್ಬವನ್ನು ವರ್ಷಕ್ಕೆ 11ಬಾರಿ ಅಂದರೆ ಮಾರ್ಚ್ ತಿಂಗಳೊಂದು ಬಿಟ್ಟು ಉಳಿದ ಪ್ರತಿ ತಿಂಗಳೂ ಆಚರಿಸುತ್ತಾರೆ. ಬೆಲ್ಲೆಹೇಮಿನ ಏಸು ಹುಟ್ಟಿದ ಸ್ಥಳದಲ್ಲಿ ದೇವಾಲಯದಲ್ಲಿ ಬೇರೆ ಬೇರೆ ಸಭೆಗಳವರು ಬೇರೆ ಬೇರೆ ದಿವಸಗಳಲ್ಲಿ ಈ ಹಬ್ಬವನ್ನು ಆಚರಿಸುತ್ತಿದ್ದರು. ರಾಜರುಗಳ ಮತ್ತು ಜನಸಾಮಾನ್ಯರ ಪ್ರೋತ್ಸಾಹ ದೊರೆಯಲು ಪ್ರಾರಂಬವಾದ ಮೇಲೆ ಕ್ರಿ. ಶ. ನಾಲ್ಕನೇ ಶತಮಾನದ ಉತ್ತರಾರ್ಧದಿಂದ ಈ ಕ್ರಿಸ್ಮಸ್ ಹಬ್ಬ ಅಸ್ತಿತ್ವಕ್ಕೆ ಬಂದಿದೆ ಎನ್ನಬಹುದು. ರೋಮನ್ ಕೆಥೋಲಿಕರು ಜನವರಿ 6 ರಂದು ಆಚರಿಸುತ್ತಿದ್ದ ಸೂರ್ಯನ ಹಬ್ಬವಾದ ಎಫಿಫನಿಯೂ ಕ್ರಿಸ್ತನ ಜನನವನ್ನು ಸ್ಮರಣೆಗೆ ತರುವಂತಹ ಹಬ್ಬವಾಗಿತ್ತು. ಇದರಿಂದ ಎರಡು ಬಿನ್ನವಾದ ದಿನಗಳಲ್ಲಿ ಈ ಹಬ್ಬವನ್ನು ಆಚರಿಸುವಂತಾಯಿತು. ಆದರೆ ಕ್ರಿಶ್ಚಿಯನ್ ಕ್ಯಾಲೆಂಡರ್ ಪ್ರಪಂಚದಾದ್ಯಂತ ಅಸ್ತಿತ್ವಕ್ಕೆ ಬಂದ ನಂತರ ಕ್ರಮೇಣ ಡಿಸೆಂಬರ್ 25ರಂದು ಎಲ್ಲಾ ದೇಶಗಳಲ್ಲಿ ಆಚರಣೆಗೆ ಬಂತು. ಕ್ರಿಸ್ತ ಹುಟ್ಟಿದ ಕೆಲವು ದಿನಗಳ ನಂತರ ಅಲ್ಲಿಗೆ ಬೇಟಿ ನೀಡಿದ ಮೂಡಣದ ಜೋಯಿಸರು ಬಂದು ಬಾಲ ಏಸುವನ್ನು ಲೋಕಕ್ಕೆ ಪರಿಚಯಿಸಿದ ದಿನವನ್ನು ಇಂದು ಎಫಿಫನಿ, ಜೋಯಿಸರ ಹಬ್ಬ, ಪಂಡಿತರ ಹಬ್ಬ ಎಂಬದಾಗಿ ಜನವರಿ 6ರಂದು ಆಚರಿಸಲಾಗುತ್ತಿದೆ. ಕ್ರೈಸ್ತರೆನಿಸಿಕೊಂಡ ಈಗಿನ ಹೊಸ ಅನೇಕ ಪಂಗಡಗಳು ಈ ಕ್ರಿಸ್ಮಸ್ ಹಬ್ಬವನ್ನು ಆಚರಿಸುವುದಿಲ್ಲ. ಇದಕ್ಕೆ ಅವರು ಕೊಡುವ ಕಾರಣ ಸತ್ಯವೇದದಲ್ಲಿ ಈ ಹಬ್ಬವನ್ನು ಆಚರಿಸಬೇಕೆಂದು ಎಲ್ಲಿಯೂ ಹೇಳಿಲ್ಲ. ಅಲ್ಲದೆ ಡಿಸೆಂಬರ್ 25 ಅದು ಪೇಗನರು ಆಚರಿಸುವ ಸೂರ್ಯನ ಹಬ್ಬದ ದಿನವಾಗಿದೆ. ಕ್ರಿಸ್ತ ಯಾವ ದಿನ 172 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...