Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/150

From Wikisource
This page has not been proofread.

ಪ್ರಾಂತಗಳಿಗೆ ಕೆಲವು ಶಾಖೆಗಳೂ ಬಂಗಾಳದಿಂದ ಪೂರ್ವ ಕರಾವಳಿಯ ಒರಿಸ್ಸಾ ಪ್ರಾಂತವನ್ನು ದಾಟಿ ಇನ್ನೂ ಕೆಲವು ಶಾಖೆಗಳೂ ದಕ್ಷಿಣಕ್ಕೆ ಬಂದು ನೆಲಸತೊಡಗಿದರು. ಈ ವಿಂದ್ಯ ಪರ್ವತದ ದಕ್ಷಿಣ ಭಾಗಕ್ಕೆ ದಕ್ಷಿಣಾಪಥ ಅಥವಾ ದಣವೆಂಬ ಹೆಸರಾಯಿತು. ಕಾಲಕ್ರಮದಲ್ಲಿ ಪಶ್ಚಿಮ ಶಾಖೆಯು ಕೊಂಕಣ, ಹೈಗ, ತೌಳವ ಕೇರಳ ಈ ಪ್ರಾಂತಗಳನ್ನು ಸೇರಿಕೊಂಡಿತು. ಪೂರ್ವಶಾಖೆಯವರು ಆಂದ್ರ ತಮಿಳ, ಪ್ರದೇಶಗಳಲ್ಲಿ ವಾಸ ಮಾಡತೊಡಗಿದರು. ಹೀಗಾಗಿ ಅತೀ ಪುರಾತನವಾಗಿದ್ದ ತಮಿಳು ಭಾಷೆಯಿಂದ ಮುಂದೆ ತೆಲುಗು (ಆಂಧ್ರ), ಕನ್ನಡ, ಮಲೆಯಾಳ, ತುಳು ಇತ್ಯಾದಿ ಭಾಷೆಗಳು ಉತ್ಪನ್ನವಾದವು. (ಏಳನೆ ದರ್ಜೆಯ ಸಚಿತ್ರ ಚರಿತ್ರೆ ಮತ್ತು ಕಥೆಗಳು. ಎಂ. ಬಾಬು, ಪ್ರಕಾಶಕರು ಮತ್ತು ಮುದ್ರಕರು ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು, 1929) ತಮಿಳು ತೆಲಗು ಈ ದ್ರವಿಡ ಭಾಷೆಗಳಂತೆ ಕನ್ನಡವು ಶುದ್ಧವೂ ಪ್ರೌಢವೂ ಆದ ಭಾಷೆಯಾಗಿದೆ. ಪ್ರಾಚೀನ ಭಾಷೆಯಾದ್ದರಿಂದ ಕನ್ನಡದಲ್ಲಿ ಹಳೆಗನ್ನಡ, ಹೊಗನ್ನಡ ಎಂಬ ಎರಡು ಭೇದಗಳುಂಟು. ಹಳೆಗನ್ನಡವು ಪ್ರಾಚೀನ ಗ್ರಂಥ- ಪ್ರಬಂಧಾದಿಗಳಲ್ಲಿ ಮಾತ್ರ ಕಂಡು ಬರುತ್ತದೆ. ಹೊಸಗನ್ನಡವೆಂದರೆ, ಈಗ ಜನರು ಆಡುವ ಭಾಷೆ, ಕನ್ನಡದಲ್ಲಿ ಪ್ರಾಚೀನ ಗ್ರಂಥಸಂಗ್ರಹವು ತಕ್ಕ ಮಟ್ಟಿಗೆ ಇರುತ್ತದೆ. ವೇದಾಂತ, ಧರ್ಮ ಪುರಾಣ, ವ್ಯಾಕರಣ, ಜ್ಯೋತಿಷ್ಯ, ವೈದ್ಯಕ ಮುಂತಾದ ವಿಷಯಗಳ ಗ್ರಂಥಗಳೂ, ಮನೋರಂಜಕವಾದ ಕಾವ್ಯಗಳೂ ಹಲವುಂಟು. ಕನ್ನಡ ಭಾಷೆಯು ಇಷ್ಟು ಸುಧಾರಿಸಿ ಪ್ರೌಢಸ್ಥಿತಿಗೆ ಬಂದದ್ದು ಜೈನರಿಂದ ಜೈನರು ಕರ್ನಾಟಕದಲ್ಲಿ ಪ್ರಬಲರಾಗಿದ್ದಾಗ ಕನ್ನಡ ಭಾಷೆಯಲ್ಲಿ ಹಲವು ಗ್ರಂಥಗಳಾದವು. ಜೈನರ ತರುವಾಯ ಬ್ರಾಹ್ಮಣರೂ ಲಿಂಗವಂತರೂ ಕೆಲಕೆಲವು ಗ್ರಂಥಗಳನ್ನು ಬರೆದರು. ಅವುಗಳಲ್ಲಿ ರಾಜಶೇಖರವಿಲಾಸ, ಜೈಮಿನಿ ಮುಂತಾದ ಸರಸ ಪ್ರಬಂಧಗಳು ಕರ್ನಾಟಕದಲ್ಲೆಲ್ಲ ಮಾನ್ಯವಾಗಿರುವವು. (ಮುಂಬಯಿ ಇಲಾಖೆಯೊಳಗಿನ ಸರಕಾರಿ ವಿದ್ಯಾಖಾತೆ, ಕರ್ನಾಟಕದ ವರ್ಣನೆಯೂ ಇತಿಹಾಸವೂ, ಬರೆದವರು ವೆಂಕಟೇಶ ನರಸಿಂಗರಾವ ಮಗದಾಳ, 15ನೇ ಅವೃತ್ತಿ 1930 (ಈ ಪುಸ್ತಕದ ಬಾದ್ಯತೆಯು ಹಿಂದುಸ್ತಾನ ಸರಕಾರದವರ ಸನ್ 1867ನೇ ಇಸವಿಯ 25ನೇ ಆಕ್ಕಿನಂತೆ ರಿಜಿಷ್ಟರ ಮಾಡಲ್ಪಟ್ಟಿದೆ) ಮುದ್ರಕರು ಹಾಗೂ ಪ್ರಕಾಶಕರು ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು. 138 ಇಲ್ಲಿ ಕೇವಲ 3 ಪಠ್ಯಪುಸ್ತಕದಲ್ಲಿದ್ದ ಮಾದರಿಯನ್ನು ಮಾತ್ರ ಕೊಡಲಾಗಿದೆ. ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...