Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/147

From Wikisource
This page has not been proofread.

ಲಿಪಿಯುಂಟಾಯಿತೆಂದು ತೋರುತ್ತದೆ. ಈ ವರ್ಣಮಾಲೆಯು ಅಶೋಕನಿಂದ ಪ್ರಚಲಿತವಾದ ಬ್ರಹ್ಮ ವರ್ಣಮಾಲೆಯಿಂದ ಹುಟ್ಟಿರುವದು. ಕನ್ನಡದಲ್ಲಿ ಹಳಗನ್ನಡವೆಂತಲೂ ಹೊಸಗನ್ನಡವೆಂತಲೂ ಎರಡು ಬೇಧಗಳುಂಟು. ಹಳಗನ್ನಡವು ಸುಮಾರು 1800 ವರ್ಷಗಳಿಂದ ತಿದ್ದುಪಡಿ ಹೊಂದಿರುತ್ತದೆ. ಹಳಗನ್ನಡದಲ್ಲಿ ಕಾಲಕ್ರಮದಿಂದಲೂ ಸ್ತಲಭೇದದಿಂದಲೂ ಅನ್ಯಭಾಷಾ ಸಂಪರ್ಕದಿಂದಲೂ ಬಹಳ ರೂಪಾಂತರವಾಗಿ ಈಗಿನ ಹೊಸಗನ್ನಡ ವಾಗಿರುತ್ತದೆ. ಹೊಸಗನ್ನಡದಲ್ಲಿ ಎಷ್ಟೋ ಹಳಗನ್ನಡ ಶಬ್ದಗಳ ಮೂಲ ವರ್ಣಗಳು ಬದಲಾಗಿರುವವಲ್ಲದೆ ವ್ಯಾಕರಣದಲ್ಲಿ ಸಹ, ವಿಶೇಷವಾಗಿ ಸಾಧಿತ ಪ್ರತ್ಯಯಗಳಲ್ಲಿಯೂ ವಿಭಕ್ತಿ ಪ್ರತ್ಯಯಗಳಲ್ಲಿಯೂ ಬಹಳ ಹೆಚ್ಚು ಕಡಿಮೆ ಗಳಾಗಿರುತ್ತವೆ. ಅದ್ದರಿಂದ ಬರೇ ಹೊಸಗನ್ನಡವನ್ನು ಬಲ್ಲವರಿಗೆ ಹಳಗನ್ನಡವು ದೊರ್ಬೋಧವಾಗಿರುವದು. ಕನ್ನಡವು ಸಂಸ್ಕೃತದಿಂದ ಹುಟ್ಟಿದಂತ ಸ್ವತಂತ್ರ ಭಾಷೆಯಾದರೂ, ಅದು ತಿದ್ದುಪಡಿ ಹೊಂದಿ ಗ್ರಂಥಸ್ಥ ಭಾಷೆಯಾದದ್ದು ಸಂಸ್ಕೃತದ ಸಹಾಯದಿಂದಲೇ, ಕನ್ನಡದ ಬಹುತರ ಯಾವತ್ತು ಗ್ರಂಥಗಳಿಗೆ ಸಂಸ್ಕೃತ ಗ್ರಂಥಗಳೇ ಆಧಾರವಾಗಿರುವವು. ಆದ್ದರಿಂದ ಕನ್ನಡದಲ್ಲಿ ಸಂಸಂಸ್ಕೃತ ಶಬ್ದಗಳೂ ತದ್ಭವಶಬ್ದಗಳೂ ಸಾವಿರಗಟ್ಟೆ ಸೇರಿರುತ್ತವೆ. ಸಂಸ್ಕೃತಕ್ಕೆ ಸಂಬಂಧಪಟ್ಟಂಥ ಶಬ್ದಗಳನ್ನು ಉಪಯೋಗಿಸದೆ ಬರೆದಂಥ ಗ್ರಂಥವು ಇದುವರೆಗೆ ಹುಟ್ಟಿಲ್ಲ. ಕನ್ನಡವನ್ನು ತಿದ್ದಿ ಮೊದಲ ಅಭಿವೃದ್ಧಿಗೆ ತಂದವರು ಜೈನರು. ಕ್ರಿಸ್ತಶಕದ ಅದಿಭಾಗದಿಂದ ಈ ನಾಡಿನಲ್ಲಿ ಪ್ರಬಲರಾಗಿದ್ದ ಜೈನ ಅರಸರು ಕನ್ನಡಕ್ಕೆ ಮಹದಾಶ್ರಯವನ್ನು ಕೊಟ್ಟದ್ದರಿಂದ ಆ ಕಾಲದಲ್ಲಿ ಧರ್ಮಗ್ರಂಥಗಳೂ ಲೌಕಿಕ ಗ್ರಂಥಗಳೂ ಕನ್ನಡದಲ್ಲಿಯೇ ರಚಿಸಲ್ಪಟ್ಟು ಕನ್ನಡವು ಬಹಳ ಬೆಳೆಯಿತು. ಅಲ್ಲಿಂದ ಹದಿಮೂರನೇ ಶತಮಾನದ ವರೆಗೆ ಆದ ಉದ್ಧಂಥಗಳೆಲ್ಲ ಜೈನ ಕವಿಗಳಿಂದಲೇ ಆಗಿರುತ್ತವೆ. ಕ್ರಿಸ್ತಶಕದ ಮೊದಲಿನ ಐದು ಶತಮಾನಗಳಲ್ಲಿ ಸಮಂತಭದ್ರ, ಸಿಂಹನಂದಿ, ಮಾಧವ, ಪೂಜ್ಯಪಾದ ಇವರೆ ಮೊದಲಾದ ಲೋಕೋತ್ತರ ಕನ್ನಡ ಕವಿಗಳು ಆದರೆಂದು ಶಾಸನಗಳಿಂದಲೂ, ಅವರ ತರುವಾಯ ಆದ ಕವಿಗಳೂ ಮಾಡಿದ ಉಲ್ಲೇಖದಿಂದಲೂ ತಿಳಿಯುತ್ತದೆ. ಆದರೆ ಅವರು ಬರೆದ ಗ್ರಂಥಗಳು ಉಪಲಬ್ಧವಿಲ್ಲ. ಆರನೇ ಏಳನೆ ಶತಮಾನಗಳಲ್ಲಿ ಶ್ರೀವರ್ಧನದೇವ, ರವಿಕೀರ್ತಿಗಳೆಂಬ ಮಹಾಕವಿಗಳೂ, ಎಂಟನೇ ಒಂಬತ್ತನೇ ಶತಮಾನಗಳಲ್ಲಿ ವೀರಸೇನ, ನೃಪತುಂಗ, ಗುಣವರ್ಮರೆಂಬ ಪ್ರಖ್ಯಾತ ಕವಿಗಳೂ ಆಗಿಹೋದರು. ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 135