Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/145

From Wikisource
This page has not been proofread.

ಆಡುತ್ತಿದ್ದಿಲ್ಲ; ಮೂಲತ೦ಡಗಳವರು ಆರ್ಯಭಾಷೆಗಳಲ್ಲಿಯೇ ತಮ್ಮ ವ್ಯವಹಾರಗಳನ್ನು ಸಾಗಿಸುತಿದ್ದರು. ಈ ವ್ಯವಹಾರದ ಭಾಷೆಗಳಿಗೆ ಪ್ರಾಕೃತ ಭಾಷೆಗಳೆಂಬ ಹೆಸರು. ಈ ಪ್ರಾಕೃತಭಾಷೆಗಳಿಂದಲೇ ಅರ್ವಾಚೀನವಾದ ದೇಶಿಯ ಆರ್ಯಭಾಷೆಗಳು ಹುಟ್ಟಿ ಈಗಿನ ಸ್ವರೂಪವನ್ನು ಹೊಂದಿರುವುವವು. ಪ್ರಾಕೃತಭಾಷೆಯಲ್ಲಿ ಬರೆದ ಗ್ರಂಥಗಳೂ ಹಲವುಂಟು. ಬೌದ್ಧಮತದ ಧರ್ಮಗ್ರಂಥಗಳು ಪಾಲೀ ಎಂಬ ಒಂದು ಪ್ರಾಕೃತಭಾಷೆಯಲ್ಲಿ ಬರೆಯಲ್ಪಟ್ಟಿರುವವು. ಹಾಗೂ ಸಾಮಾನ್ಯ ಜನರಿಗೋಸ್ಕರ ಹಲವು ಸಂಸ್ಕೃತಗ್ರಂಥಗಳು ಪ್ರಾಕೃತಕ್ಕೆ ಪರಿವರ್ತಿಸಲ್ಪಟ್ಟಿರುತ್ತವೆ. ಅರ್ವಾಚೀನಭಾಷೆಗಳಲ್ಲಿ ಈ ಗ್ರಂಥಸ್ಥ ಸಂಸ್ಕೃತದಿಂದ ಅನೇಕ ಅಂಶಗಳು ತೆಗೆದುಕೊಳ್ಳಲ್ಪಟ್ಟಿರುತ್ತವೆ. ಇತ್ತಲಾಗಿ ಈ ದೇಶಕ್ಕೆ ಬಂದ ಮಹಮ್ಮದೀಯರು ಪಾರ್ಸೀ, ಅರಬೀ ಭಾಷೆಗಳನ್ನು ತಂದರು. ಅದ್ದರಿಂದ ಈ ಭಾಷೆಗಳಿಂದಲೂ ಅನೇಕ ಶಬ್ದಗಳು ದೇಶೀಯ ಭಾಷೆಗಳಲ್ಲಿ ಸೇರಿಕೊಂಡಿರುತ್ತವೆ. ಸದ್ಯದ ಸಿಂದಿ ಭಾಷೆಯು ಅರ್ಧ ಪ್ರಾಕೃತಭಾಷೆಯೂ ಅರ್ಧ ಪಾರ್ಸೀ-ಅರಬೀ ಭಾಷೆಗಳೂ ಕೂಡಿ ಆಗಿರುತ್ತದೆ. ಗುಜರಾಥೀ-ಮರಾಠಿ ಭಾಷೆಗಳಲ್ಲಿ ಪಾರ್ಸೀ-ಅರಬೀ ಶಬ್ದಗಳು ತಕ್ಕ ಮಟ್ಟಿಗೆ ಸೇರಿರುತ್ತವೆ; ಆದರೆ ಪುಸ್ತು-ಬಲೂಚಿ-ಹಿಂದುಸ್ತಾನೀ ಭಾಷೆಗಳು ಅರಬೀ-ಪಾರ್ಸೀ ಭಾಷೆಗಳಿಂದಲೇ ಹುಟ್ಟಿರುತ್ತವೆಂದು ಹೇಳಬಹುದು. ಹಿಂದುಸ್ತಾನಿ ಭಾಷೆಯು ಉತ್ತರ ಹಿಂದುಸ್ತಾನದಲ್ಲಿ ಸಾರ್ವತ್ರಿಕವಾಗಿದೆ. ದಕ್ಷಿಣ ಹಿಂದುಸ್ತಾನದಲ್ಲಿಯೂ, ಛೋಟಾನಾಗಪುರ-ಮಧ್ಯಪ್ರಾಂತಗಳ ಅಲ್ಪಸ್ವಲ್ಪ ಪ್ರದೇಶಗಳಲ್ಲಿಯೂ ವಾಸಿಸುವ ಜನರು ಮುಖ್ಯವಾಗಿ ದ್ರವಿಡವರ್ಗದ ಭಾಷೆಗಳನ್ನು ಆಡುವರು. ದ್ರವಿಡವರ್ಗದಲ್ಲಿ ತಮಿಳು, ತೆಲಗು, ಕನ್ನಡ (*ನೀಲಗಿರಿಯ ಬಡಗ, ಕುರಂಬ ಎಂಬ ಕಾಡಭಾಷೆಗಳೂ ಕೊಡಗಿನ ಕೊಡಗು ಭಾಷೆಯೂ ಕನ್ನಡಕ್ಕೆ ಸೇರಿರುತ್ತವೆ; ಇವು ತಿದ್ದುಪಡಿಯನ್ನು ಹೊಂದಿಲ್ಲ ತುಳು, ಮಲೆಯಾಳ ಎಂಬ ಐದು ತಿದ್ದುಪಡಿ ಹೊಂದಿದ ಭಾಷೆಗಳೂ, ತೋಡ, ಕೋಟ, ಮಂದಾವರ, ಗೊಂಡ ಮೊದಲಾಗ ಗುಡ್ಡಗಾಡ ಜನರು ಆಡುವ ಭಾಷೆಗಳೂ, ಬ್ರಹ್ಮಯಿ ಎಂಬ ಬಲೂಚಿಸ್ತಾನದ ಒಂದು ಪ್ರದೇಶದ ಜನರು ಆಡುವ ಭಾಷೆಯೂ ಬರುತ್ತದೆ. ದ್ರವಿಡ ಭಾಷೆಗಳ ಮೂಲ ಉತ್ಪತಿಯ ಬಗ್ಗೆ ಇನ್ನೂ ನಿಶ್ಚಯಾತ್ಮಕವಾಗಿ ಯಾವದೂ ತಿಳಿದಿಲ್ಲ. ದ್ರವಿಡ ವರ್ಗದ ಭಾಷೆಗಳು ಆರ್ಯಭಾಷೆಗೆ ಸಂಬಂಧವಿಲ್ಲದ ಸ್ವತಂತ್ರ ಭಾಷೆಗಳೆಂದು ಹೇಳಬಹುದು. ಹಿಂದುಸ್ತಾನದ ಉತ್ತರ ಸೀಮೆಯಲ್ಲಿಯೂ, ಬ್ರಹ್ಮದೇಶದಲ್ಲಿಯೂ ಇರುವ ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 133