Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/130

From Wikisource
This page has not been proofread.

ದಾನೆಯೆ ದಾನೆಯೆ ಓಡೆಗ್ ಪೋಪರ್, ಎನನ್ ತೂದು ಪೋಡಿದ್ ಈರ್ ದಾಯೆಗ್ ಬಲ್ಲುವ‌ ಬಲ್ಪಂದೆ ಬಲ್ಪಂದೆ ಯಾನಾ ಬದುಕೊಡುಯಾ, ನಾಲ್ ದಿನತ ಬಾಳುವೆ ಎನ್ನ ಪೊರ್ಲುಡು ಪೋವೊಡುಯಾ ಆರಾಧನೆಯಲ್ಲದೆ ಕ್ರೈಸ್ತರಲ್ಲಿ ತುಳು ಬಳಕೆ: ಉಡುಪಿ ಪ್ರದೇಶದ, ಅಂಬಾಡಿ, ಮಣಿಪುರ, ಶಿರ್ವ, ಪಾಂಗಾಳಗುಡ್ಡೆ, ಪಾದೂರು, ಮಲ್ಪೆ, ಬೈಲೂರು, ಕುತ್ಯಾರ್, ಸಾಂತೂರು, ಉದ್ಯಾವರ, ಮಲ್ಪೆ ಹಾಗೂ ಮಂಗಳೂರು ಪ್ರದೇಶದ ಕೆಲವುಕಡೆ ಈಗಲೂ ದೇವಾಲಯಗಳಲ್ಲಿ ನಡೆಯುವ ಸಭಾ ಮೀಟಿಂಗ್‌ಗಳು ತುಳುವಿನಲ್ಲಿಯೇ ನಡೆಯುತ್ತಿವೆ. ಹಿಂದೆ ಮೀಟಿಂಗ್ ವರದಿಗಳನ್ನು ತುಳುವಿನಲ್ಲಿಯೇ ಬರೆದಿಡಲಾಗುತ್ತಿದ್ದು ಪ್ರಸ್ತುತ ಕೆಲವು ಕಡೆ ಅದರ ಸ್ಥಾನವನ್ನು ಕನ್ನಡ ಆಕ್ರಮಿಸಿಕೊಂಡಿದೆ. ಮದುವೆ ಸಂದರ್ಭದಲ್ಲಿ ಹೆಣ್ಣು ಒಪ್ಪಿಸಿ ಕೊಡುವಾಗ, ಔತಣಕೂಟದಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುವಾಗ ಹಳ್ಳಿ ಸಭೆಗಳಲ್ಲಿ ಈಗಲೂ ತುಳು ಬಳಕೆಯಲ್ಲಿವೆ. ಅಲ್ಲದೆ ಮನೆ ಪ್ರಾರ್ಥನೆಗಳನ್ನು ತುಳುವಿನಲ್ಲಿಯೇ. ಕಥೋಲಿಕ ಕ್ರೈಸ್ತರಲ್ಲಿ ತುಳು ಭಾಷೆ: ತುಳು ಜಿಲ್ಲೆಗಳಲ್ಲಿರುವ ಎಲ್ಲಾ ಕೆಥೋಲಿಕ ಕ್ರೈಸ್ತರ ಮಾತೃ ಭಾಷೆ ಕೊಂಕಣಿ ಆದರೂ ಅವರೆಲ್ಲರೂ ತುಳು ಭಾಷೆಯನ್ನು ಬಲ್ಲವರಾಗಿದ್ದು, ಅವರೆಲ್ಲರಿಗೆ ತುಳು ಮತ್ತು ಕೊಂಕಣಿ ಎಂಬ ಎರಡು ಮಾತೃ ಭಾಷೆ ಎಂದು ಹೇಳಿದರೆ ತಪ್ಪಾಗಲಾರದು. ಅವರ ದೇವಾಲಯಗಳಲ್ಲಿ ಆರಾಧನೆಯ ಭಾಷೆ ಕೊಂಕಣಿ. ಆದರೆ ಜೆಸೂಯಿತ ಸಂಸ್ಥೆಯಿಂದ ಕ್ರೈಸ್ತ ಮತ ಸ್ವೀಕರಿಸಿದ ಪಾವೂರು ಮುಂತಾದ ಹಳ್ಳಿಗಳಲ್ಲಿ ವಾಸಿಸುತ್ತಿರುವ ಕೆಲವು ಕೆಥೋಲಿಕ ಕ್ರೈಸ್ತರ ಆಡು ಭಾಷೆ ಹಾಗೂ ಆರಾಧನಾ ಭಾಷೆ ತುಳುವಾಗಿತ್ತು. ಈ ಹಿಂದೆ ತುಳುವಿನಲ್ಲಿ ಕ್ರಿಸ್ತಾನ್ ಶಾಸ್ತ್ರದ ಪುಸ್ತಕವನ್ನೂ ರಚಿಸಲಾಗಿದ್ದು, ಪ್ರಾರ್ಥನೆ, ಹಾಡುಗಳು, ವಿಧಿ ವಿಧಾನಗಳು ತುಳುವಿನಲ್ಲಿಯೇ ನಡೆಯುತ್ತಿದ್ದರೂ ಈಗೀಗ ಕೊಂಕಣಿಗೆ ಬದಲಾಗಿದೆ. ಪಾವೂರು ದೇವಾಲಯದಲ್ಲಿ ಕಳೆದ ನೂರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ತುಳುವಿನಲ್ಲಿ ಆರಾಧನೆ ಈಗಲೂ ನಡೆಯುತ್ತಿದೆ. ಅತ್ತೂರು ಮುಂತಾದ ಪುಣ್ಯ ಕ್ಷೇತ್ರಗಳಲ್ಲಿ ತುಳುವಿನಲ್ಲಿ ಪ್ರಾರ್ಥನೆ, ಬೋಧನೆಗಳನ್ನು ತುಳು ಭಾಷೆಯಲ್ಲಿ ಕೊಡುವ ಕ್ರಮವನ್ನು ಈಗಲೂ ಒಮ್ಮೊಮ್ಮೆ ನಡೆಸಿಕೊಂಡು ಬರಲಾಗುತ್ತಿದೆ. ತುಳು ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಕೆಥೋಲಿಕ ಕ್ರೈಸ್ತರು ಮತ್ತು ಪ್ರೊಟೆಸ್ಟಂಟ್ ಕ್ರೈಸ್ತರು ವ್ಯವಸಾಯ, ಕೃಷಿ, ಕಂಬಳ, ಕೋಳಿ ಅಂಕ, ಮುಂಚೂಣಿಯಲ್ಲಿದ್ದು ಎಲ್ಲಾ ಜನರೊಂದಿಗೆ ನಡೆಸುವುದರಿಂದ ತುಳುವೇ ಅವರ ಮಾತೃಭಾಷೆಯೋ 118 ವ್ಯಾಪಾರ ಮುಂತಾದವುಗಳಲ್ಲಿ ಹೊಂದಿಕೊಂಡು ಹೊಂದಿಕೊಂಡು ಸಹಬಾಳ್ವೆ ಎಂಬಂತೆ ಹಳ್ಳಿಗಳಲ್ಲಿ ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...