Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/123

From Wikisource
This page has not been proofread.

ಬಸ್‌ನಲ್ಲಿ ಬಂದ ಸಾರ್‌ಗೆ ಇದೇನು ಮಹಾ ಎಂದು. ಕೈಯಲ್ಲಿ ಹಿಡಿದ ಕೆಲಸವನ್ನು ಪೂರ್ತಿಗೊಳಿಸದಿದ್ದರೆ ಹಾವನೂರರಿಗೆ ನಿದ್ದೆ ಖಂಡಿತ ಇಲ್ಲ. ಬರವಣಿಗೆ ಹೇಗೋ ಓದಿನಲ್ಲಿಯೂ ಅಷ್ಟೇ ಕಾಳಜಿ ಇತ್ತು. ಹಾವನೂರರು ಪೂಫ್ ರೀಡ್ ಮಾಡಿದರೆಂದರೆ ಅದರಲ್ಲಿ ತಪ್ಪಿಲ್ಲ ಎಂದರ್ಥ. ಬರವಣಿಗೆಗೆ ತೊಡಗುವವರಿಗೆ ಕಿವಿಮಾತು, ಸಲಹೆ, ಮಾರ್ಗದರ್ಶನ, ಸಹಾಯ ಮಾಡುವುದೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ, ಯಾಕ್ ಸಾರ್ ಇಷ್ಟು ಪ್ರಾಯವಾದರೂ ನಿಮ್ಮ ಶಕ್ತಿಗೆ ಮೀರಿ ಸಹಾಯ ಮಾಡುವಿರಿ ಅಂದರೆ ನಾನು ಸಾಹಿತಿ ಎಂದು ನನ್ನನ್ನು ಸಮಾಜ ಗುರುತಿಸಿದೆ ಅದಕ್ಕೂ ಮಿಗಿಲಾಗಿ ನಾನು ಗ್ರಂಥಪಾಲಕನಾಗಿದ್ದವ. ಪ್ರತಿ ಗ್ರಂಥಕ್ಕೂ ಒಬ್ಬ ಓದುಗ ಇದೇ ಇದ್ದಾನೆ ಅದನ್ನು ಓದಿಸುವುದು ನನ್ನ ಕರ್ತವ್ಯ ಇಲ್ಲವಾದರೆ ನನ್ನ ಹುದ್ದೆಗೆ ಬೆಲೆಯಲ್ಲಿದೆ ಎನುತ್ತಿದ್ದರು. ನನ್ನ ಎರಡು ಕೃತಿಗಳಾದ ಬಿಲ್ಲವರು ಮತ್ತು ಬಾಸೆಲ್ ಮಿಶನ್, ಗಾನ ಗೊಂಚಲು ಇವುಗಳಿಗೆ ಈ ಹೆಸರನ್ನು ಸೂಚಿಸಿದವರೇ ಡಾ. ಹಾವನೂರರು. ಅವರು ನಮ್ಮನ್ನಗಲುವ 15 ದಿನಗಳ ಹಿಂದೆ ನನಗೆ ಫೋನ್‌ನಲ್ಲಿ ಸಂಭಾಶಿಸಿ ಏನ್ ತಮ್ಮಾ ಬರೆಯುವುದು ನಿಲ್ಲಿಸಬೇಡ ನಿನಗೆ ಸಾಧ್ಯ ಉಂಟು, ಇಂತಿಂತದ್ದು ಬರಿ, ಬರೆದು ನನಗೆ ಕಳುಹಿಸು ನಾನು ತಿದ್ದಿ ತೀಡಿ ಸಹಾಯ ಮಾಡುತ್ತೇನೆ ಅಂದಿದ್ದರು. ಆದರೆ ತಿದ್ದಲು ಹಾವನೂರ್ ಸಾರ್ ಇನ್ನೆಲ್ಲಿ? ಅವರ ನಿಯತ್ತು, ದಾಖಲೀಕರಣ ಕ್ರಮ, ಪುಸ್ತಕ ಪ್ರೀತಿ ಅವುಗಳನ್ನು ಮನನ ಮಾಡಿಕೊಂಡೇ ನಾನು ಬರೆಯಬೇಕು. ನೀವೂ ಬರೆಯಬೇಕು. ಡಾ. ಹಾವನೂರರು ನಮ್ಮನ್ನಗಲಿ 10 ವರ್ಷಗಳು ಕಳೆದವು. ಆದರೆ ಅವರ ಗ್ರಂಥ ಸೇವೆ, ಕನ್ನಡ ಸಾಹಿತ್ಯ ಸೇವೆ ಮರೆಯಲಾಗದ ನೆನಪು. ಕನ್ನಡದ ನಿಜ ಸಂಶೋಧಕ ಹಾವನೂರರು ಎಂದರೆ ತಪ್ಪಾಗದು. 1928ರಲ್ಲಿ ಜನಿಸಿದ ಇವರು ಗ್ರಂಥಪಾಲಕ, ಉಪನ್ಯಾಸಕ, ಸಂಶೋಧಕ, ಮಾರ್ಗದರ್ಶಕರಾಗಿ, ಮುಂಬಯಿ, ಮಂಗಳೂರು, ಪುಣೆ, ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದರು. ಇವರು ಕನ್ನಡ ಭಾಷೆಗಾಗಿ ಮಾಡಿದ ಸೇವೆ ಅಪಾರ, ಸಂಶೋಧನೆ ಮಾಡಬೇಕಾದ ವಿದೇಶಿ ಬರವಣಿಗೆಗಳು, ದಾಸ ಸಾಹಿತ್ಯದ ಆರಂಭಕಾಲ, ಆರಂಭದ ಪತ್ರಿಕೆಗಳು, ಆರಂಭದ ಚರಿತ್ರಾ ಸಾಹಿತ್ಯಗಳು ಇಂತಹ ಸಂಶೋಧನೆಗಳಲ್ಲಿ ಕಾರ್ಯನಿರತರಾಗಿದ್ದ ಇವರು ಪುಸ್ತಕ ಪ್ರೇಮಿಯಾಗಿದ್ದರು. ರಾಜ್ಯೋತ್ಸವ, ಆಳ್ವಾಸ್ ನುಡಿಸಿರಿ, ಮುಳಿಯ ತಿಮ್ಮಪ್ಪಯ್ಯ, ಸಂದೇಶ ಪ್ರತಿಷ್ಟಾನ ಮುಂತಾದ ಪ್ರಶಸ್ತಿಗಳನ್ನು ಗಳಿಸಿರುವ ಇವರು 65ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು ಮಾತ್ರವಲ್ಲದೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 111