Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/116

From Wikisource
This page has not been proofread.

ದೇವಾಲಯದ ಗೋಪುರದಲ್ಲಿ ಬಾಸೆಲ್ ಮಿಶನ್ ನಿರ್ಮಿತ ರೆವೆ. ಎಸ್. ಮಿಲ್ಲರ್ ನಾಯಕತ್ವದಲ್ಲಿ ತಯಾರಾದ ಬೃಹತ್ ಗಡಿಯಾರವನ್ನು ಅಳವಡಿಸಲಾಗಿದ್ದು ಈಗಲೂ ಸುಸ್ಥಿತಿಯಲ್ಲಿದ್ದು ಮಂಗಳೂರಿನಲ್ಲಿ ಈಗ ಪ್ರತಿಷ್ಟಾಪಿಸಲಿರುವ ಕ್ಲಾಕ್ ಟವರ್ ಸ್ಥಳದಲ್ಲಿ 1968ರಲ್ಲಿ ವಾಮನ್ ನಾಯಕ್ ಸಂಸ್ಥೆ ಪ್ರತಿಷ್ಠಾಪಿಸಿದ್ದ ಘಂಟೆ ಸ್ಥಾಪನೆ ಆಗುವ ತನಕ ಮಂಗಳೂರಿಗೆ ಸಮಯ ತಿಳಿಸುವ ಏಕೈಕ ಗಡಿಯಾರ ಇದಾಗಿತ್ತು. ದೇವಾಲಯದ ಪರಿಸರದಲ್ಲಿ ಸ್ಥಾಪನೆಗೊಂಡ ಗಡಿಯಾರವನ್ನೇ ಕಂಡು 12 ಘಂಟೆಗೆ ಗುಂಡು ಹಾರಿಸುವ ಕ್ರಮವಿತ್ತು. ಸಂತ ಪೌಲನ ದೇವಾಲಯದ ಗಡಿಯಾರವನ್ನು ವಾಮನ್ ನಾಯಕ್ ಸಂಸ್ಥೆಯವರೇ ಹಲವಾರು ವರ್ಷಗಳವರೆಗೆ ದುರಸ್ಥಿ ಮಾಡುತ್ತಿದ್ದರು. 1834ರಲ್ಲಿ ಮಂಗಳೂರಿನ ನೀರೇಶ್ವಾಲ್ಯ ಪರಿಸರದಲ್ಲಿ ಬಾಸೆಲ್ ಮಿಶನ್ ಸ್ಥಾಪಿಸಿದ ಸಣ್ಣ ಪ್ರಾರ್ಥನಾ ಮಂದಿರವಿದ್ದರೂ ಇಂಗ್ಲಿಷ್ ಆರಾಧನೆಗಾಗಿ ಬಾಸೆಲ್ ಮಿಶನರಿಗಳು 1862 ತನಕ ಸಂತ ಪೌಲನ ದೇವಾಲಯಕ್ಕೆ ಆರಾಧನೆಗೆ ಹೋಗುತ್ತಿದ್ದುದು ಮಾತ್ರವಲ್ಲದೆ ಆರಾಧನೆಯ ವಿಧಿವಿಧಾನಗಳನ್ನೂ ನಡೆಸುತ್ತಿದ್ದರು. ಇಲ್ಲಿ ನೇಮಕಗೊಂಡ ಚಾಪ್ಲಿನ್ ಮಡಿಕೇರಿಯಲ್ಲಿದ್ದ ಸಂತ ಮಾರ್ಕನ ದೇವಾಲ ಯದ ಚಾಪ್ಲಿನ್ ಆಗಿಯೂ ಆಗಿಯೂ ಸೇವೆ ಸಲ್ಲಿಸುತ್ತಿದ್ದರು. ಮದ್ರಾಸ್ ಪ್ರೆಸಿಡೆನ್ಸಿ ಆಡಳಿತದಲ್ಲಿದ್ದ ಸಂತ ಪೌಲನ ದೇವಾಲಯವು 1947 ನಂತರ ಕೇರಳ ಡಯಾಸಿಸ್‌ನ ಆಡಳಿತದಲ್ಲಿದ್ದರೂ ಬಾಸೆಲ್ ಮಿಶನ್ ಸಂಸ್ಥೆಯಲ್ಲಿದ್ದ ವಿದೇಶಿ ಧರ್ಮಗುರುಗಳಾದ ರವೆ, ರೋಸೆಲ್, ರೆವೆ. ಶಾಯರ್‌ಮಯ‌ ಹಾಗೂ ದೇಶಿಯ ಧರ್ಮಗುರುಗಳು ಸಹಾ ಅಲ್ಲಿ ಆರಾಧನೆ ನಡೆಸಲು ಹೋಗುತ್ತಿದ್ದರು. 1972ರಿಂದ ಈ ಈ ದೇವಾಲಯದ ಆಡಳಿತವು ಕರ್ನಾಟಕ ದಕ್ಷಿಣ ಸಭಾಪ್ರಾಂತದ ಆಡಳಿತಕ್ಕೆ ಒಳಪಟ್ಟು ಕಾರ್ಯ ನಿರ್ವಹಿಸುತ್ತಿದ್ದು, 1999ರ ತನಕ ಪ್ರಾರ್ಥನಾ ವಿಧಿವಿಧಾನಗಳನ್ನು ನಡೆಸಲು ಕರ್ನಾಟಕ ತಿಯೊಲಾಜಿಕಲ್ ಕಾಲೇಜ್‌ನಲ್ಲಿರುವ ಧರ್ಮಗುರುಗಳು ನಡೆಸುತ್ತಿದ್ದು ಪ್ರಸ್ತುತ ಡಯಾಸಿಸ್ ನೇಮಕವಾದ ಧರ್ಮಗುರುಗಳಿಂದ ಮುನ್ನಡೆಯುತ್ತಿದೆ. ಇಲ್ಲಿ ಇಂಗ್ಲಿಷ್‌ನಲ್ಲಿ ಆರಾಧನೆಗಳು ನಡೆಯುತ್ತಿದೆ. ಹಿಂದೆ ಹಲವಾರು ವರ್ಷಗಳವರೆಗೆ ಮಾರ್ಥೋಮಾ ಸಭೆಯ ಹಿನ್ನೆಲೆಯುಳ್ಳ ಕ್ರೈಸ್ತರು ಇಲ್ಲಿನ ಆರಾಧನೆಯಲ್ಲಿ ಭಾಗವಹಿಸುತ್ತಿದ್ದದರಿಂದ ಮಲಯಾಳಂ ಭಾಷೆಯಲ್ಲಿಯೂ ಆರಾಧನೆ ನಡೆಯುತ್ತಿದ್ದು ಕಳೆದ 25 ವರ್ಷಗಳಿಂದ ಬಲ್ಮಠದಲ್ಲಿ ನಿರ್ಮಾಣಗೊಂಡ ಮಾರ್ಥೋಮಾ ಸಭೆಯಲ್ಲಿ 104 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...