Jump to content

Page:ಕತ್ತುರಿ ಕಮ್ಮೆನ - ಜೋಕುಲೆ ಪದಜೊಂಕುಲಿ.pdf/87

From Wikisource
This page has not been proofread.

ಚಂನಿರನೇತಕೆ ಓಡುವನಮ್ಮು ಸಾಹಿತ್ಯ: ನೀರ, ಹೀರೇಮಠ ಚಂದಿರನೇತಕೆ ಓಡುವನಮ್ಮ ಮೋಡಕೆ ಹೆದರಿಹನೇ? ಬೆಳ್ಳಿಯ ಮೋಡದ ಅಲೆಗಳ ಕಂಡು ಚಂದಿರ ಬೆದರಿಹನೆ? ಹಿಂಜಿದ ಅರಳೆಯು ಗಾಳಿಗೆ ಹಾರಿ ಮೋಡಗಳಾಗಿಹವೇ? ಅರಳೆಯು ಮುತ್ತಿ ಮೈಯನು ಸುತ್ತಿ ಚಂದ್ರನ ಅಗಿಯುವವೇ? ಮಂಜಿನಗಡ್ಡೆಯ ಮೋಡವು ಕರಗಲು ಚಂದಿರ ನಗುತಿಹನು ಕರಗಿದ ಮೋಡದ ಸೆರೆಯನು ಹರಿಯುತ ಬಾನಂ ತೇಲುವನು ಚಂದಿರನೆನ್ನಯ ಗೆಳೆಯನು ಅಮ್ಮಾ ನನ್ನೊಡನಾಡುವನು ನಾನೂ ಓಡಲು ತಾನೂ ಓಡುವ ಚೆನ್ನಿಗ ಚಂದಿರನು ಬಾ ಬಾ ಚಂದಿರ ಬೆಳ್ಳಿಯ ಚಂದಿರ ನಮ್ಮಯ ಮನೆಗೀಗ ನಿನ್ನಯ ಬೆಳಕನು ಎಲ್ಲೆಡೆ ಚೆಲ್ಲಿ ಮನವನು ಬೆಳಗೀಗ CHANDIRANETAKE ODUVANAMMA CHANDIRANETAKE ODUVANAMMA MODAKE HEDARIHANE? BELLIYA MODADA ALEGALA KANDU CHANDIRA BEDARIHANE ? HINJIDA ARALEYU GALIGE HARI MODAGALAGIHAVE? ARALEYU MUTTI MYEYANU SUTTI CHANDRANA BIGUYUVAVE ? MANJINAGADDEYA MODAVU KARAGALU CHANDIRA NAGUTIHANU KARAGIDA MODADA SEREYANU HARIYUTA BANALI TELUVANU CHANDIRANENNAYA GELEYANU AMMA NANNODANAADUVANU NANOO ODALU TANOO ODUVA CHENNIGA CHANDIRANU BAA BAA CHANDIRA BELLIYA CHANDIRA NAMMAYA MANEGEEGA NINNAYA BELAKNU ELLEDE CHELLI MANAVANU BELAGEEGA b 76 బారుల సమత్య ಜೋಕುಲೆ ಸಾಹಿತ್ಯ 76